ಕೊಪ್ಪಳ: ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.
ಗಂಗಾವತಿ ತಾಲೂಕಿನಲ್ಲಿರುವ ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿಗೆ ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಹಲವಾರು ಮುಖಂಡರು ಅವರನ್ನು ಸ್ವಾಗತಿಸಿದರು. 575 ಮೆಟ್ಟಲು ಏರಿ ಆಂಜನೇಯನ ದರ್ಶನ ಪಡೆದರು. ವಿಜಯಶಂಕರ್ ಕಳೆದ ಎರಡು ದಿನಗಳಿಂದಲೂ ಕೊಪ್ಪಳ ಜಿಲ್ಲೆಯಲ್ಲಿದ್ದಾರೆ. ವಿಜಯಶಂಕರ್ ಅವರ ತಂದೆ ಕೊಪ್ಪಳ ಜಿಲ್ಲೆಯವರಾಗಿರುವುದರಿಂದಾಗಿ ಕೊಪ್ಪಳದ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.