ಬೆಂಗಳೂರು :ಸಿಎಂ ಸಿದ್ದರಾಮಯ್ಯ ಅವರು ನಿನ್ನೆಯಿಂದ ಶಾಸಕರ ಸಭೆ ನಡೆಸುತ್ತಿದ್ದು, ಇಂದೂ ಸಹ ಮುಂದುವರಿಯಲಿದೆ.
ನಿನ್ನೆ ಐದು ಜಿಲ್ಲೆಗಳ ಸಭೆ ನಡೆಸಲಾಗಿದ್ದು, ಇಂದು ಹತ್ತು ಜಿಲ್ಲೆಗಳ ಶಾಸಕರ ಸಭೆ ನಡೆಸಲಿದ್ದಾರೆ. ವಿಧಾನಸೌಧದ ಸಿಎಂ ಕಚೇರಿಯಲ್ಲಿ ಬೆಳಿಗ್ಗೆ 10:00ರಿಂದ ರಾತ್ರಿ 6-30ವರೆಗೆ ಸಭೆ ನಡೆಯಲಿದೆ.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಬೆಳಗಾವಿ, ಹುಬಳ್ಳಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ಉಸ್ತುವಾರಿ ಸಚಿವರುಗಳ ಸಮ್ಮುಖದಲ್ಲಿಯೇ ಸಭೆಯನ್ನು ನಡೆಸಲಾಗುತ್ತದೆ.
ಶಾಸಕರು ಅನುದಾನಕ್ಕಾಗಿ, ಕಾಮಗಾರಿ ವಿವರದೊಂದಿಗೆ ಆಗಮಿಸಲು ಸಿಎಂ ಸೂಚಿಸಿದ್ದಾರೆ. ಶಾಸಕರಿಗೆ ತಲಾ 50ಕೋಟಿ ಅನುದಾನ ಹಂಚಿಕೆ ಮಾಡಿರುವ ಹಿನ್ನೆಲೆ ಕಾಮಗಾರಿ ವಿವರವನ್ನು ಪಡೆಯುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಶಾಸಕರ ವಿಶ್ವಾಸ ಗಳಿಸುವ ಪ್ರಯತ್ನದ ಭಾಗವಾಗಿ ಸಭೆ ಮಾಡುತ್ತಿದ್ದಾರೆ ಎಂದು ವಿಪಕ್ಷಗಳಿಂದ ಆರೋಪ ಮಾಡುತ್ತಿವೆ.