ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಮಾಜಿ ಸೈನಿಕರ ಕೊಡುಗೆಯ ಆರೋಗ್ಯ ಯೋಜನೆ (Ex-Servicemen Contributory Health Scheme) ಅಡಿಯಲ್ಲಿ ಮೆಡಿಕಲ್ ಆಫೀಸರ್, ಡೆಂಟಲ್ ಅಸಿಸ್ಟಂಟ್ ಅಥವಾ ಡೆಂಟಲ್ ಹೈಜೆನಿಸ್ಟ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನವಾಗಿದೆ.
ಕರ್ನಾಟಕದ ಕಾರವಾರ ಘಟಕದಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ, ಅಧಿಸೂಚನೆ, ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಇ ಸಿ ಎಚ್ ಎಸ್ ವೆಬ್ ಸೈಟ್ ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಿದ ಬಳಿಕ ಸಂದರ್ಶನ ನಡೆಸಲಾಗುವುದು. ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಸಂದರ್ಶನ ದಿನಾಂಕ, ಸಮಯ, ಸ್ಥಳದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ಸಮಯದಲ್ಲಿ ಎಲ್ಲ ಮೂಲ ದಾಖಲೆಗಳನ್ನು ತೆಗೆದುಕೊಂಡು ಹಾಜರಾಗುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.
ವೇತನ ಎಷ್ಟು?
ಮೆಡಿಕಲ್ ಆಫೀಸರ್ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ 75 ಸಾವಿರ ರೂ. ವೇತನ ನೀಡಲಾಗುತ್ತದೆ. ಡೆಂಟಲ್ ಹೈಜೆನಿಸ್ಟ್ ಅಥವಾ ಡೆಂಟಲ್ ಅಸಿಸ್ಟಂಟ್ ಹುದ್ದೆಗೆ ನೇಮಕಾತಿ ಹೊಂದಿದವರಿಗೆ ಮಾಸಿಕ 28,100 ರೂ. ಸಂಬಳ ನೀಡಲಾಗುತ್ತದೆ.
ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂಬಿಬಿಎಸ್ ಪಾಸಾಗಿರಬೇಕು. ಹಾಗೆಯೇ, ಕನಿಷ್ಠ ಐದು ವರ್ಷ ಕಾರ್ಯಾನುಭವ ಹೊಂದಿರಬೇಕು. ಮಾಜಿ ಸೈನಿಕರಿಗೆ ಶೇ.60ರಷ್ಟು ಮೀಸಲಾತಿ ನೀಡಲಾಗಿದೆ. ಇನ್ನು ಡೆಂಟಲ್ ಹೈಜೆನಿಸ್ಟ್ ಅಥವಾ ಡೆಂಟಲ್ ಅಸಿಸ್ಟಂಟ್ ಹುದ್ದೆಗೆ ಅರ್ಜಿ ಕ್ಲಾಸ್ -1 ಡಿಎಚ್ ಅಥವಾ ಡಿ ಎಚ್ ಆರ್ ಎ ಕೋರ್ಸ್ (ಸಶಸ್ತ್ರ ಪಡೆಗಳು) ಮುಗಿಸಿರಬೇಕು. ಕನಿಷ್ಠ 5 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಮಾಜಿ ಸೈನಿಕರಿಗೆ ಶೇ.70ರಷ್ಟು ಮಿಸಲಾತಿ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ : OIC, Stn HQs (ECHS Cell) INS Kadamba Naval Base Karwar Po- Arga Karwar – 581308. ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸ್ವಯಂ ದೃಢೀಕೃತ ದಾಖಲೆಗಳು, ಕಾರ್ಯಾನುಭವ ದಾಖಲೆಗಳನ್ನು ಲಗತ್ತಿಸಬೇಕು.