ಈ ವರ್ಷದ ವರ್ಷಾಂತ್ಯಕ್ಕೆ ಸಿನಿ ರಸಿಕರಿಗೆ ಭರ್ಜರಿ ಹಬ್ಬದೂಟ ಸಿಕ್ಕಿದೆ. ಕನ್ನಡದಲ್ಲಿನ ಇಬ್ಬರು ಸ್ಟಾರ್ ಗಳ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಅಲ್ಲದೇ, ಯಾವ ಚಿತ್ರ ನೋಡಬೇಕು ಎಂಬ ಗೊಂದಲ ಕೂಡ ಅವರಿಗೆ ಮೂಡಿದೆ. ಇದರ ಮಧ್ಯೆ ಎರಡೂ ಚಿತ್ರಗಳು ಯಶಸ್ಸು ಕಾಣುತ್ತ ಸಾಗುತ್ತಿರುವುದು ಸಂತಸದ ಸಂಗತಿ.
ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಚಿತ್ರ ಡಿಸೆಂಬರ್ 20ರಂದು ಬಿಡುಗಡೆಯಾಯಿತು. ಜನರಿಗೆ ಈ ಚಿತ್ರ ಇಷ್ಟ ಆಯಿತು. ಈ ಸಿನಿಮಾನ ಫ್ಯಾನ್ಸ್ ಮತ್ತೆ ಮತ್ತೆ ಹೋಗಿ ವೀಕ್ಷಣೆ ಮಾಡಿದರು. ಈ ಸಿನಿಮಾದ ಹವಾ ಇನ್ನೂ ಜೀವಂತ ಇರುವಾಗಲೇ ಮ್ಯಾಕ್ಸ್ ತೆರೆಗೆ ಅಪ್ಪಳಿಸಿತು.
‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಬಂದಿತು. ಈ ಚಿತ್ರ ಮಾಸ್ ಆ್ಯಕ್ಷನ್ ಹೊಂದಿದೆ. ಜನರು ಇದನ್ನೂ ಇಷ್ಟ ಪಟ್ಟರು. ಹೀಗಾಗಿ ‘ಯುಐ’ ಚಿತ್ರದ ಕಲೆಕ್ಷನ್ ಕೊಂಚ ತಗ್ಗಿದೆ. ಪರಿಣಾಮ ಡಿ. 27ರಂದು ‘ಯುಐ’ ಚಿತ್ರ ಕೇವಲ ಒಂದು ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 26.3 ಕೋಟಿ ರೂ. ಆಗಿದೆ. ‘ಯುಐ’ ಕೇವಲ ಮೂರೇ ದಿನಕ್ಕೆ 16 ಕೋಟಿ ರೂ. ಗಳಿಸಿತ್ತು. ಆದರೆ, ಡಿ. 28 ಹಾಗೂ ಡಿ. 29 ರಜೆ ಇರುವ ಹಿನ್ನೆಲೆಯಲ್ಲಿ ಎರಡೂ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡಬಹುದು ಎನ್ನಲಾಗುತ್ತಿದೆ.