ಕಿಚ್ಚ ಸುದೀಪ್ ನಟಿಸಿರುವ ಮ್ಯಾಕ್ಸ್ ಚಿತ್ರದ ಬಿಡುಗಡೆಗೆ ಅಭಿಮಾನಿಗಳಿಗೆ ಕಾಯುತ್ತಿದ್ದಾರೆ. ಈ ಮಧ್ಯೆ ಅಭಿಮಾನಿಗಳಿಗೆ ಚಿತ್ರ ತಂಡ ಸಿಹಿ ನೀಡಿದೆ.
ಈಗಾಗಲೇ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗಿದ್ದು, ಡಿ. 25ರಂದು ‘ಮ್ಯಾಕ್ಸ್ ತೆರೆಗೆ ಅಪ್ಪಳಿಸಲಿದೆ. ಈ ಮಧ್ಯೆ ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇಂದು ಚಿತ್ರದುರ್ಗದಲ್ಲಿ ಪ್ರೀ-ರಿಲೀಸ್ ಇವೆಂಟ್ ಮಾಡಲಾಗಿತ್ತು. ಈ ವೇದಿಕೆಯಲ್ಲಿ ಟ್ರೇಲರ್ ಅನಾವರಣ ಮಾಡಲಾಗಿದೆ. ಈ ಸಿನಿಮಾಗೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಸುದೀಪ್ ಮಾಸ್ ಲುಕ್ ನೋಡಿ ಅಭಿಮಾನಿಗಳಿಗೆ ಖುಷಿ ತಂದಿದೆ.
ಚಿತ್ರವು ಆ್ಯಕ್ಷನ್ ಕಹಾನಿ ಹೊಂದಿದೆ. ಈ ಚಿತ್ರದಲ್ಲಿ ಸುದೀಪ್ ಅವರಿಗೆ ಹೀರೋಯಿನ್ ಇಲ್ಲ. ಪಕ್ಕಾ ಆ್ಯಕ್ಷನ್ ಬಯಸುವ ಪ್ರೇಕ್ಷಕರಿಗೆ ‘ಮ್ಯಾಕ್ಸ್’ ಸಿನಿಮಾದಲ್ಲಿ ಮನರಂಜನೆಯ ಫುಲ್ ಮೀಲ್ಸ್ ಸಿಗಲಿದೆ ಎಂಬುವುದನ್ನು ಟ್ರೇಲರ್ ಸಾಬಿತು ಪಡಿಸಿದೆ. ಖಡಕ್ ಡೈಲಾಗ್ ಗಳ ಮೂಲಕ ಸುದೀಪ್ ಭರ್ಜರಿ ಗುಡುಗಿದ್ದಾರೆ.
‘ಮ್ಯಾಕ್ಸ್’ ಚಿತ್ರದಲ್ಲಿ ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುನಿಲ್, ಪ್ರಮೋದ್ ಶೆಟ್ಟಿ, ವರಲಕ್ಷ್ಮಿ ಶರತ್ ಕುಮಾರ್, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ ಸೇರಿದಂತೆ ಹಲವರು ನಟಿಸಿದ್ದಾರೆ. ಸದ್ಯ ಟ್ರೇಲರ್ ನೋಡಿರುವ ಅಭಿಮಾನಿಗಳು ಭಾರೀ ಖುಷಿ ವ್ಯಕ್ತಪಡಿಸುತ್ತಿದ್ದಾರೆ.