ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ಭರ್ಜರಿ ಜನ ಮನ್ನಣೆಯೊಂದಿಗೆ ಮುನ್ನುಗ್ಗುತ್ತಿದೆ. ಗುರುವಾರ ಕೂಡ ಚಿತ್ರ ಭಾರೀ ಪ್ರದರ್ಶನ ಕಂಡಿದ್ದು, ಉತ್ತಮ ಕಲೆಕ್ಷನ್ ಮಾಡುತ್ತಿದೆ.
‘ಮ್ಯಾಕ್ಸ್’ ಸಿನಿಮಾ ಸುದೀಪ್ ವೃತ್ತಿ ಜೀವನಕ್ಕೆ ದೊಡ್ಡ ಗೆಲುವು ತಂದು ಕೊಟ್ಟಿದೆ. ಅಭಿಮಾನಿಗಳು ಹಾಗೂ ಸಿನಿ ರಸಿಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿಯೇ ರಜಾ ದಿನ ಹೊರತು ಪಡಿಸಿಯೂ ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ವಾರದ ಮಧ್ಯದ ದಿನಗಳಲ್ಲಿಯೂ ಉತ್ತಮ ಕಲೆಕ್ಷನ್ ಮಾಡುತ್ತಿದೆ.
‘ಮ್ಯಾಕ್ಸ್’ ಸಿನಿಮಾ ಡಿ. 25ರಂದು ತೆರೆಗೆ ಅಪ್ಪಳಿಸಿತ್ತು. ಆ ಮೂಲಕ ಕಳೆದ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ದಾಖಲೆಯನ್ನೂ ಮಾಡಿತು. ಹೊಸ ವರ್ಷಕ್ಕೆ ರಜೆ ಇದ್ದ ಕಾರಣ ಸಿನಿಮಾ 4.62 ಕೋಟಿ ರೂ. ಗಳಿಪಾಯಿ ಗಳಿಸಿತ್ತು. ಜನವರಿ 2ರಂದು ಸಿನಿಮಾ 1.75 ಕೋಟಿ ರೂ. ಗಳಿಸಿದೆ.
ಜ.1ಕ್ಕೆ ಹೋಲಿಕೆ ಮಾಡಿದರೆ ಗುರುವಾರದ ಕಲೆಕ್ಷನ್ ಕಡಿಮೆ ಆಗಿದೆ. ವಾರದ ದಿನವೂ ಸಿನಿಮಾ ಸುಮಾರು 2 ಕೋಟಿ ರೂ. ಕಲೆಕ್ಷನ್ ಮಾಡುತ್ತಿದೆ ಎಂದರೆ ಅದು ಖುಷಿಯ ಸಂಗತಿಯೇ ಸರಿ. ಹೀಗಾಗಿ ಹಲವು ಕಡೆಗಳಲ್ಲಿ ‘ಯುಐ’ ಬದಲು ‘ಮ್ಯಾಕ್ಸ್’ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.