ಬೆಂಗಳೂರು : ಬೆಂಗಳೂನ ಹೊರವಲಯದ ಬೇಗೂರುನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೇಗೂರುನ ಅಕ್ಷಯನಗರದಲ್ಲಿರುವ ಸ್ಕ್ರಾಪ್ ಗೋಡೌನ್ಗೆ ಏಕಾಏಕಿ ಬೆಂಕಿ ತಗುಲಿದ್ದು, ನೋಡ ನೋಡುತ್ತಲೆ ಇಡೀ ಗೋಡೌನ್ ಧಗಧಗನೆ ಹೊತ್ತಿ ಉರಿದಿದೆ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕ್ಷಣ ಮಾತ್ರದಲ್ಲೇ ಅಗ್ನಿಯಿಂದ ಬಂದ ಹೊಗೆ ಇಡೀ ಏರಿಯಾವನ್ನೇ ಸುತ್ತುವರೆದಿದೆ.
ಗೋಡನ್ನಲ್ಲಿ ಇದ್ದ ಹಳೆಯ ಪ್ಲಾಸ್ಟಿಕ್ ವಸ್ತುಗಳು ಹೊತ್ತಿ ಉರಿಯುತ್ತಿದ್ದು, ಬೆಂಕಿಯ ಹೊಗೆ ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ 3 ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿಗಳು ದೌಡಾಯಿಸಿದ್ದು, ಸದ್ಯ ಬೆಂಕಿ ನಂದಿಸುವ ಕಾರ್ಯ ನಡೆಸುತತ್ತಿದ್ದಾರೆ. ಬೆಂಕಿ ಹೊತ್ತಿಕೊಳ್ಳು ನಿಖರ ಕಾರಣ ಏನು ಅನ್ನೋದು ಇನ್ನು ತಿಳಿದು ಬಂದಿಲ್ಲ.