ಬೆಂಗಳೂರು: ಹಿಂದಿ ಹೇರಿಕೆ ವಿರುದ್ಧ ಬೃಹತ್ ಅಭಿಯಾನ ಆರಂಭವಾಗಿದ್ದು, ರಾಜ್ಯದಲ್ಲಿ ಹಿಂದಿ ಹೇರಿಕೆ ಖಂಡಿಸಿ ಹೋರಾಟಕ್ಕೆ ಸಿದ್ಧತೆ ನಡೆದಿದೆ.
ತ್ರಿಭಾಷಾ ನೀತಿ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯಾಗಬೇಕು. ಹೀಗಾಗಿ ಎರಡು ನುಡಿ-ಜಾಗೃತಿಯ ಕಿಡಿ ಅಭಿಯಾನ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಮಾರ್ಚ್ 16ಕ್ಕೆ ಸಾರ್ವಜನಿಕ ಹಕ್ಕೋತ್ತಾಯ ಸಭೆ ನಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಈ ಸಭೆ ನಡೆಯಲಿದೆ. ಅಂದು ದ್ವಿಭಾಷಾ ನೀತಿಯ ಪ್ರಭಾವ ಮತ್ತು ಜಾಗೃತಿಯ ಅವಶ್ಯಕತೆ ಕುರಿತು ತಜ್ಞರ ಮಾತು ಕೇಳಿ, ಚರ್ಚೆ ನಡೆಸಲಾಗುತ್ತದೆ.
ತ್ರಿಭಾಷಾ ಸೂತ್ರದಡಿ ಹಿಂದಿ ಕಡ್ಡಾಯ ಮಾಡಲಾಗಿದೆ. ಈ ನಿಯಮವನ್ನು ಕಿತ್ತೆಸೆಯಬೇಕು ಎಂದು ಆಗ್ರಹಿಸಲಾಗುತ್ತದೆ. ಈ ಸಭೆಯಲ್ಲಿ ಖ್ಯಾತ ಸಾಹಿತಿಗಳು, ಬರಹಗಾರರು, ಕನ್ನಡ ಚಿಂತಕರು, ಹೋರಾಟಗಾರು ಭಾಗಿಯಾಗಲಿದ್ದಾರೆ.
ಮಾರ್ಚ್ 16ರ ಕಾರ್ಯಕ್ರಮದ ಉದ್ದೇಶವೇನು?
- ಕರ್ನಾಟಕದಲ್ಲಿ ಎರಡು ನುಡಿ (ದ್ವಿಭಾಷಾ) ನೀತಿಯನ್ನು ರೂಪಿಸಿ ಜಾರಿಗೊಳಿಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುವುದು.
- ಕನ್ನಡ ಮತ್ತು ಕರ್ನಾಟಕದ ನುಡಿಗಳ ಹಕ್ಕುಗಳನ್ನು ಕಾಪಾಡುವುದು
- ಸಾರ್ವಜನಿಕರಲ್ಲಿ ನುಡಿಯ ಅರಿವು ಮೂಡಿಸುವುದು