ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಲ್ಲಿಇಂದು(ಸೋಮವಾರ) ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ನೆರವೇರಿಸಲಾಯಿತು.
ಮಾದಪ್ಪನ ಸನ್ನಿಧಿಯಲ್ಲಿ ಹಸೆಮಣೆ ಏರಿದ 95 ಜೋಡಿಗಳ ಪೈಕಿಯಲ್ಲಿ 16 ಮಂದಿ ಅಂತರ್ಜಾತಿಯ ವಿವಾಹವಾಗಿದ್ದು, ಪ್ರಾಧಿಕಾರದ ವತಿಯಿಂದ ಉಚಿತವಾಗಿ ವಧುವಿಗೆ ಚಿನ್ನದ ಮಾಂಗಲ್ಯ, ಬೆಳ್ಳಿಕಾಲುಂಗುರ, ಸೀರೆ ರವಿಕೆ, ವರನಿಗೆ ಪಂಚೆ, ಶರ್ಟ್, ಟವೆಲ್ ನೀಡಲಾಗಿದೆ.
ನವಜೋಡಿಗಳು ಶುಭ ಕನ್ಯಾ ಲಗ್ನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಹನೂರು ಶಾಸಕ ಮಂಜುನಾಥ್ ಸಾಕ್ಷಿಯಾದರರು.
1989 ರಿಂದ ಪ್ರತಿ ವರ್ಷ ಮಾದಪ್ಪನ ಸನ್ನಿಧಿಯಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಈವರೆಗೆ 2024 ಜೋಡಿಗೆ ಕಂಕಣಭಾಗ್ಯ ದೊರೆತಿದೆ.