ಲಂಡನ್ : ಕೇಂಬ್ರಿಡ್ಜ್‌ಶೈರ್‌ನ ಪೂರ್ವದ ಗ್ರಾಮೀಣ ಪಟ್ಟಣ ಹಂಟಿಂಗ್‌ಡನ್ ಎಂಬಲ್ಲಿ ಇಬ್ಬರು ದುಷ್ಕರ್ಮಿಗಳು ರೈಲಿನಲ್ಲಿ ಸಾಮೂಹಿಕವಾಗಿ ಚಾಕುವಿನಿಂದ ಇರಿದಿದ್ದು, 10 ಮಂದಿಗೆ ಗಾಯಗಳಾಗಿವೆ. ಇದೀಗ ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಚೂರಿ ಇರಿತದಲ್ಲಿ 10 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಒಂಬತ್ತು ಮಂದಿಗೆ ಮಾರಣಾಂತಿಕ ಗಾಯಗಳಾಗಿವೆ. ಎಂದು ಬ್ರಿಟಿಷ್ ಪೊಲೀಸರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಒಬ್ಬ ಪ್ರತ್ಯಕ್ಷದರ್ಶಿ ಮಾತನಾಡಿದ್ದು, “ಘಟನೆಯ ವೇಳೆ ವ್ಯಕ್ತಿಯೊಬ್ಬ ದೊಡ್ಡ ಚಾಕು ಹಿಡಿದುಕೊಂಡಿದ್ದನ್ನು ನಾನು ನೋಡಿದೆ. ಜನರು ಶೌಚಾಲಯಗಳಲ್ಲಿ ಅಡಗಿದ್ದು, ಅಲ್ಲೆಲ್ಲ ರಕ್ತದ ಕಲೆಗಳು ಕಂಡುಬಂದಿವೆ” ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಭಯದಿಂದ ಕೆಲವು ಪ್ರಯಾಣಿಕರು ಓಡಲು ಪ್ರಯತ್ನಿಸುತ್ತಿದ್ದಾಗ ಬೆನ್ನಟ್ಟಿದ ದುಷ್ಕರ್ಮಿಗಳು ಅವರಿಗೆ ಮನಬಂದಂತೆ ಚೂರಿಯಿಂದ ಇರಿಯುತ್ತಿದ್ದರು. ಈ ವೇಳೆ ಕೆಲವರು ನಾವು ನಿನ್ನನ್ನು ಪ್ರೀತಿಸುತ್ತೇವೆ ಎಂದು ಕೂಗುತ್ತಿರುವುದು ನನಗೆ ಕೇಳಿಸಿತು” ಎಂದು ಹೇಳಿದರು.
ಇದನ್ನೂ ಓದಿ : ಇಬ್ಬರ ಬಲಿ ಪಡೆದ ಕಾಡಾನೆ ಸೆರೆ | ಹಿಡಿಯಲು 6 ಸಾಕಾನೆಗಳ ಆಗಮನ



















