ಈಗಂತೂ ಸ್ಟಾರ್ ಗಳ ಮಕ್ಕಳು ಕೂಡ ಸಿನಿಮಾ ರಂಗಕ್ಕೆ ಬರುವುದು ಕಾಮನ್ ಆಗಿ ಬಿಟ್ಟಿದೆ. ಅದೇ ರೀತಿ ಭಾರತದ ಚಿತ್ರರಂಗದಲ್ಲಿ ಮಾಸ್ ಮಹಾರಾಜ ಎನಿಸಿಕೊಂಡಿರುವ ರವಿತೇಜ ಇದೀಗ ತಮ್ಮ ಮಕ್ಕಳಿಗೆ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂಬ ಗುಸು ಗುಸು ಹಬ್ಬಿದೆ.
ಹೌದು! ಈಗಾಗಲೇ ಅವರ ಮಗ ಮಹಾಧನ್ ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ರವಿತೇಜ ಮಗಳು ಮೋಕ್ಷಧಾ ಭೂಪತಿರಾಜು ಅವರು ಸಿನಿಮಾ ರಂಗದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮೋಕ್ಷಧಾ ಅವರಿಗೆ ನಿರ್ಮಾಪಕಿ ಆಗುವ ಕನಸು ಇದೆ. ಆನಂದ್ ದೇವರಕೊಂಡ ನಟನೆಯ, ವಿನೋದ್ ಅನಂತೋಜು ನಿರ್ದೇಶನದ ಚಿತ್ರದ ಮೇಲುಸ್ತುವಾರಿಯನ್ನು ಮೋಕ್ಷಧಾ ನೋಡಿಕೊಳ್ಳಲಿದ್ದಾರೆ. ವಿನೋದ್ ಹಾಗೂ ಆನಂದ್ ಈ ಮೊದಲು ‘ಮಿಡಲ್ ಕ್ಲಾಸ್ ಮೆಲೋಡಿ’ ಹೆಸರಿನ ಸಿನಿಮಾ ಮಾಡಿದ್ದರು. ಈ ಸುದ್ದಿ ಕೇಳಿ ರವಿತೇಜ ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ.