ಕೊಪ್ಪಳ: ಮಾಸ್ಕ್ ಹಾಕಿಕೊಂಡು ಬಂದು ಔಷಧಿ ಅಂಗಡಿಯಲ್ಲಿ ಇದ್ದ 30 ಸಾವಿರ ದೋಚಿರುವ ಘಟನೆ ಕೊಪ್ಪಳದ ಹನುಮಸಾಗರ ವೆಂಕಟೇಶ್ವರ ಮೆಡಿಕಲ್ ಶಾಪ್‌ನಲ್ಲಿ ನಡೆದಿದೆ.
ಇಬ್ಬರು ಕಳ್ಳರು ಮಾಸ್ಕ ಹಾಕಿಕೊಂಡು ಬಂದು ಅಂಗಡಿಯ ಬಾಗಿಲು ಕೀ ಮುರಿದು ಒಳಗೆಹೋಗಿ, ಅಂಗಡಿಯ ಗಲ್ಲಾ ಪೆಟ್ಟಿಗೆಯಲ್ಲಿದ್ದ 30 ಸಾವಿರ ದೋಚಿದ್ದಾರೆ ಹಾಗೂ ಅಂಗಡಿ ಒಳಗಿನ ಸಿಸಿಟಿವಿ ಕದ್ದೋಯ್ದಿದಿರುವ ದೃಶ್ಯ ಹೊರಗಡೆ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇತ್ತೀಚಿಗೆ ಇಲಕಲ್ ಬಳಿ ಗೋರೆಬಾಳದಲ್ಲಿ ಮಾಸ್ಕ ತಂಡವೊಂದು ಕಳ್ಳತನ ಯತ್ನ ಮಾಡಿತ್ತು. ಗೋರೆಬಾಳ ಹಾಗೂ ಹನುಮಸಾಗರ ಮಧ್ಯೆ ಕೇವಲ 15 ಕಿಮೀ ಅಂತರವಿದೆ. ಇದೇ ತಂಡ ಇಲ್ಲಿ ಕೂಡ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಘಟನಾ ಸಂಬಂಧ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.



















