ಬೆಂಗಳೂರು: ಮದುವೆ ಸೀಸನ್ ಆರಂಭವಾಗಿದೆ. ಯುವಕ-ಯುವತಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಹಣಕಾಸು ಸಮಸ್ಯೆಯಿಂದಾಗಿ ನೀವು ಮದುವೆ ಮುಂದೂಡುತ್ತಿದ್ದೀರಾ? ಹಾಗಾದರೆ, ಚಿಂತೆ ಬೇಡ. ಹೌದು, ಐಸಿಐಸಿಐ ಬ್ಯಾಂಕ್ ಮದುವೆಗಾಗಿಯೂ ಸಾಲ ನೀಡುತ್ತಿದೆ. 50 ಸಾವಿರ ರೂ.ನಿಂದ 50 ಲಕ್ಷ ರೂ.ವರೆಗೆ ಸಾಲ ನೀಡುತ್ತಿದೆ. ಅವಶ್ಯಕತೆ ಇದ್ದವರು ಅರ್ಜಿ ಸಲ್ಲಿಸಿ, ಸಾಲ ಪಡೆಯಬಹುದಾಗಿದೆ.
ಐಸಿಐಸಿಐ ಬ್ಯಾಂಕ್ ಸಾಲದ ಮೇಲೆ ವಿಧಿಸುವ ಬಡ್ಡಿಯು ವಾರ್ಷಿಕ ಶೇ.10.85ರಿಂದ ಆರಂಭವಾಗುತ್ತದೆ. ಮರುಪಾವತಿ ಮಾಡಲು 12 ರಿಂದ 72 ತಿಂಗಳವರೆಗೆ ಅವಕಾಶವಿದೆ. ಮದುವೆ ಸಾಲ ಪಡೆಯಲು ಯಾವುದೇ ಆಸ್ತಿಯನ್ನು ಅಡಮಾನವಾಗಿ ಇಡುವ ಅಗತ್ಯವಿಲ್ಲ ಎಂದು ಐಸಿಐಸಿಐ ಬ್ಯಾಂಕ್ ತಿಳಿಸಿದೆ. ಮಂಜೂರಾದ ಮೊತ್ತವು 72 ಗಂಟೆಯಲ್ಲಿ ಅರ್ಜಿದಾರರ ಖಾತೆಗೆ ಜಮೆಯಾಗುತ್ತದೆ.
ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ?
- iMobile app ಡೌನ್ ಲೋಡ್ ಮಾಡಿಕೊಳ್ಳಿ
- ಆಪ್ ನಲ್ಲಿ ಲಾಗ್ ಇನ್ ಆಗಿ, ಗೆಟ್ ಇನ್ ಸ್ಟಂಟ್ ಲೋನ್ ಹಾಗೂ ಅಪ್ಲೈ ನೌ ಮೇಲೆ ಕ್ಲಿಕ್ ಮಾಡಿ
- ಸಾಲದ ಮೊತ್ತವನ್ನು ನಮೂದಿಸಿ
- ಸಾಲ ಪಡೆಯಲು ಎಲ್ಲ ಪ್ರಕ್ರಿಯೆಗಳನ್ನು ಅನುಸರಿಸಿ
- ಷರತ್ತುಗಳಿಗೆ ಒಪ್ಪಿಗೆ ಸೂಚಿಸಿ, ‘Disburse Now’ ಮೇಲೆ ಕ್ಲಿಕ್ ಮಾಡಿ
- ಆಧಾರ್ ಆಧಾರಿತ ಇ-ಸೈನ್ ಮಾಡಿ, ಬಳಿಕ ಸಬ್ ಮಿಟ್ ಕೊಡಿ
ಸಾಲಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಯ ನಿಯಮಿತ ಆದಾಯ ಅಥವಾ ಮಾಸಿಕ ಸಂಬಳದ ಮೇಲೆ ಸಾಲ ನೀಡುವ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಮೂರು ತಿಂಗಳ ಸ್ಯಾಲರಿ ಸ್ಲಿಪ್ ಅಥವಾ ಆದಾಯ ದೃಢೀಕರಿಸುವ ದಾಖಲೆ ಸಲ್ಲಿಸಬೇಕಾಗುತ್ತದೆ. ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿ ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಇಎಂಐ ಲೆಕ್ಕಾಚಾರ ಹಾಕಲು ಐಸಿಐಸಿಐ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.