ಸ್ಯಾಂಡಲ್‍ವುಡ್‍ನ ಬಾದ್‍ಷಾ, ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ “ಮಾರ್ಕ್” ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟೀಸರ್‌ನಲ್ಲಿ ಕಿಚ್ಚ ಸುದೀಪ್ ಡೆಡ್ಲಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿಸಿದೆ.
ಇಂದು ಸಂಜೆ 6.45ಕ್ಕೆ ಮಾರ್ಕ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಕಿಚ್ಚನ ಅಭಿಮಾನಿಗಳು ಟೀಸರ್ ನೋಡಿ ಖುಷಿಯಾಗಿದ್ದಾರೆ. ಮಾರ್ಕ್ ಸಾಯಿಸಲು ಡೀಲ್ ಕೊಡುವ ದೃಶ್ಯದಿಂದ ಟೀಸರ್ ಶುರುವಾಗಿದ್ದು, ಮಾರ್ಕ್ ಯಾರು? ಆತನ ಶಕ್ತಿ ಎಂಥದ್ದು ಅನ್ನುವ ಕುರಿತಂತೆ ಟೀಸರ್ ಉತ್ತರಿಸಲಿದೆ.
ಈ ಹಿಂದೆ ಕಿಚ್ಚ ಸುದೀಪ್ ಅವರು, ಮಾರ್ಕ್ ಮುಹೂರ್ತದ ದಿನವೇ ಡಿಸೆಂಬರ್ 25ಕ್ಕೆ ಚಿತ್ರ ಬಿಡುಗಡೆ ಎಂದು ಘೋಷಣೆ ಮಾಡಿದ್ದರು. ಆ ಪ್ರಕಾರ `ಮಾರ್ಕ್’ ಸಕಲ ರೀತಿಯಲ್ಲೂ ಸಿದ್ಧವಾಗಿದ್ದು, ಕಿಚ್ಚ ರಾತ್ರಿ ಹಗಲೆನ್ನದೇ ಶೂಟಿಂಗ್ ಮಾಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಜೋರಾಗಿ ನಡೆಯುತ್ತಿದೆ. ಇನ್ನು ಸಿನಿಮಾ ರಿಲೀಸ್ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವ ವಿಚಾರ ಕೂಡ ಈಗಾಗಲೇ ಸ್ಪಷ್ಟವಾಗಿದೆ.
ಇದನ್ನೂ ಓದಿ : ಕೊನೆಗೂ ರೈತರ ಹೋರಾಟಕ್ಕೆ ಮಣಿದ ಸರ್ಕಾರ | ಪ್ರತಿ ಟನ್ ಕಬ್ಬಿಗೆ 3,300 ರೂ. ದರ ನಿಗದಿ


















