ಸೆನ್ಸಾರ್ ಬೋರ್ಡ್ ಸಿನಿಮಾಗೆ ನೀಡುವ ಸರ್ಟಿಫಿಕೇಟ್ ವಿಷಯದಲ್ಲಿ ಈಗ ಕೆಲವು ಬದಲಾವಣೆಗಳಾಗಿವೆ. ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬದಲಾವಣೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಇಲ್ಲಿಯವರೆಗೆ ದೇಶದಲ್ಲಿ ಎ, ಯು, ಯುಎ ಮತ್ತು ಎಸ್ ಎಂಬ ನಾಲ್ಕು ವಿಭಾಗದಲ್ಲಿ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಎಸ್ ವಿಧದ ಪ್ರಮಾಣ ಪತ್ರ ನೀಡಲಾಗುವ ಸಿನಿಮಾಗಳನ್ನು ಸಾರ್ವಜನಿಕರು ವೀಕ್ಷಿಸುವಂತಿಲ್ಲ. ಹೀಗಾಗಿ ಅದರ ಬಗ್ಗೆ ಜನರಿಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಆದರೆ, ಈಗ ಹೊಸ ನಿಯಮದಂತೆ ಈ ವರ್ಗೀಕರಣವನ್ನು ಮತ್ತಷ್ಟು ವಿಸ್ತರಿಸಲಾಗಿದೆ.
ಯುಎ ವರ್ಗೀಕರಣಕ್ಕೆ ಕೆಲವು ಹೆಚ್ಚುವರಿ ಉಪ ವರ್ಗೀಕರಣವನ್ನು ಸೇರಿಸಲಾಗಿದೆ. ಯುಎ ಎಂದರೆ ಎಲ್ಲರೂ ನೋಡಬಹುದಾದ ಆದರೆ, ಮಕ್ಕಳು, ಪೋಷಕರ ನಿಗಾದಲ್ಲಿ ನೋಡಬಹುದಾದ ಸಿನಿಮಾ ಎಂಬ ಅರ್ಥ ಇದೆ. ಈಗ ಇವುಗಳಲ್ಲಿ ಮತ್ತೆ ಮೂರು ವಿಧದ ವರ್ಗಾವಣೆ ಮಾಡಲಾಗಿದೆ. ಯುಎ7+, ಯುಎ13+, ಯುಎ16+ ಸೇರಿಸಲಾಗಿದೆ. ಯುಎ7+ ಎಂದರೆ, ಎಲ್ಲರೂ ನೋಡಬಹುದಾದ ಆದರೆ ಏಳರ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಫೋಷಕರ ನಿಗಾದಲ್ಲಿ ಮಾತ್ರ ನೋಡಬೇಕಾದ ಸಿನಿಮಾ. ಯುಎ13+ ಎಂದರೆ ಎಲ್ಲರೂ ನೋಡಬಹುದಾದ ಆದರೆ ಹದಿಮೂರರ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಫೋಷಕರ ನಿಗಾದಲ್ಲಿ ನೋಡಬಹುದಾದ ಸಿನಿಮಾ. ಯು ಎಂದರೆ ಯಾರು ಬೇಕಾದರೂ ಯಾರ ನಿಗಾವಣೆಯೂ ಇಲ್ಲದೆ ನೋಡಬಹುದಾದ ಸಿನಿಮಾ ಆಗಿರುತ್ತದೆ. ಎ ಎಂದರೆ 18 ವಯಸ್ಸು ಮೀರಿದವರು ಮಾತ್ರವೇ ನೋಡಬೇಕಾದ ಸಿನಿಮಾ ಆಗಿರುತ್ತದೆ. ಮಕ್ಕಳನ್ನು ಸಿನಿಮಾಗೆ ಕರೆದುಕೊಂಡು ಹೋಗುವ ಪೋಷಕರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಈ ನಿಯಮ ಜಾರಿಗೆ ತರಲಾಗಿದೆ ಎನ್ನಲಾಗಿದೆ.