ಬೆಂಗಳೂರು : ಕತ್ತಲೆಯಾದ ಬಳಿಕ ಮತ್ತೆ ಬೆಳಕು ಬರಲೇಬೇಕು. ಚಂದನವನದ ನಟ ಮಡೆನೂರು ಮನು ಬಾಳಲ್ಲಿ ಮತ್ತೀಗ ಕಾರ್ಮೋಡ ಸರಿದು ಬೆಳಕು ಹರಿದಿದೆ. ಹೌದು, ನಟ ಮನು ಮಡೆನೂರು ‘ಮುತ್ತರಸ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಮಾಡಿದ್ದಾರೆ.
ಮನು ಹುಟ್ಟುಹಬ್ಬದ ಪ್ರಯುಕ್ತವೇ “ಮುತ್ತರಸ “ಪೋಸ್ಟರ್ ರಿಲೀಸ್ ಆಗಿದ್ದು, ವಸಿಷ್ಠ ಸಿಂಹ ಸಿನೆಮಾ ತಂಡಕ್ಕೆ ಶುಭಾಶಯ ಕೋರಿದ್ದಾರೆ.
ಕೆ.ಎಂ.ನಟರಾಜ್ ನಿರ್ಮಾಣದ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗುತ್ತಿದೆ. ಮನು ಮಡೆನೂರು ತಮ್ಮ ಬದುಕಿನ ಭೂತಕಾಲವನ್ನು ಬದಿಗೊತ್ತಿ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವುದಕ್ಕೆ ಹುಮ್ಮಸ್ಸಿನಲ್ಲಿದ್ದಾರೆ.
‘ಹಳೆ ಕಥೆ, ಕೆಟ್ಟ ಕನಸು. ಶಿವಣ್ಣ, ದರ್ಶನ್ ಹಾಗೂ ಧ್ರುವ ಸರ್ಜಾ ಅಭಿಮಾನಿಗಳು ಕೂಡ ನನ್ನ ಜೊತೆಗಿರುತ್ತಾರೆ. ದಯಮಾಡಿ ಇದೊಂದು ಅವಕಾಶ ಕೊಡಿ. ಇನ್ಮುಂದೆ ಈ ರೀತಿಯ ಯಾವುದೇ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇನೆ. ಸಿನೆಮಾವನ್ನು ಪ್ರೋತ್ಸಾಹಿಸಿ. ನನ್ನನ್ನೂ ಬೆಳೆಸಿ, ನನ್ನನ್ನೂ ನಿಮ್ಮ ಮಡಿಲಿಗೆ ಹಾಕಿಕೊಳ್ಳಿ. ಸಿನೆಮಾ ಗೆಲ್ಲಿಸುತ್ತೀರಿ ಎನ್ನುವ ನಂಬಿಕೆ ಇದೆ” ಎಂದು ಮನು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.