ಉಡುಪಿ: ಹೇರಂಜಾಲು ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮನ್ಮಹಾರಥೋತ್ಸವ ವೈಭವದಿಂದ ಜರುಗಿತು.

ಆಗಮ ವಿದ್ಯಾವಾರಧಿ ಕಟ್ಟೆ ಶಂಕರ್ ಭಟ್ಟರ ಆಚಾರ್ಯತ್ವದಲ್ಲಿ ಬೆಳಗ್ಗೆ ಪ್ರಾತಃಕಾಲ ಪೂಜೆ, ನಿತ್ಯಬಲಿ, ರಥಶುದ್ಧಿ ಹೋಮ, ಶತರುದ್ರಾಭಿಷೇಕ ರಥಬಲಿ, ಕ್ಷೇತ್ರಪಾಲ ಬಲಿ, ರಥಾರೋಹಣ, ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡವು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.

ಸಂಜೆ ವಿವಿಧ ಟ್ಯಾಬ್ಲೊಗಳ ಮೂಲಕ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. ದೇವಸ್ಥಾನ ಸುತ್ತಲೂ ದೀಪಾಲಂಕಾರ ಮತ್ತು ಅಲಂಕಾರ ಕೈಗೊಳ್ಳಲಾಗಿತ್ತು. ಮುಂದಿನ ವರ್ಷದ ಜಾತ್ರೆ ಒಳಗೆ ಭವ್ಯ ರಾಜಗೋಪುರ ಮತ್ತು ದೇವಸ್ಥಾನದ ಪೌಳಿ ಲೋಕಾರ್ಪಣೆ ಮಾಡಲಿದ್ದೇವೆ ಎಂದು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು ಎಚ್.ಜಯಶೀಲ ಎನ್.ಶೆಟ್ಟಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಅಧ್ಯಕ್ಷ ಎಚ್.ಪದ್ಮನಾಭ ಮೇರ್ಟ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಎಚ್. ಜಯಶೀಲ ಎನ್.ಶೆಟ್ಟಿ, ಖಜಾಂಚಿ ಎಚ್.ವಿಜಯ್ ಶೆಟ್ಟಿ, ಜಯಶೀಲ ಶೆಟ್ಟಿ ಹೇರಂಜಾಲು, ಗುಡೇ ಮಹಾಲಿಂಗೇಶ್ವರ ಗೆಳೆಯರ ಬಳಗ, ಜಯಶೀಲ ಶೆಟ್ಟಿ, ಜಯಶೀಲ ಶೆಟ್ಟಿ, ಹೇರಂಜಾಲು, ಜೀರ್ಣೋದ್ಧಾರ ಸಮಿತಿ ಸದಸ್ಯರು, ದತ್ತಿನಿಧಿ ಸದಸ್ಯರು, ದೇವಳದ ತಂತ್ರಿಗಳು, ಅರ್ಚಕರು, ಭಜನಾ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.




















