ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಖರೀದಿಸಿ ನಗರದಲ್ಲಿ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ
ಒಟ್ಟು 24.57 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ರೂ. 4.35 ಲಕ್ಷ ಮೌಲ್ಯದ ಸೊತ್ತುಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಬಂದರು ಮತ್ತು ದಕ್ಕೆಯ ಪ್ರದೇಶದಲ್ಲಿ ಆಟೋದಲ್ಲಿ ಮಾದಕ ವಸ್ತು ಮಾರಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಅಟೋ ಚಾಲಕ ಅಬ್ದುಲ್ ಸಲಾಮ್ (39), ತಂದೆ ಅಬ್ದುಲ್ ಹಮೀದ್, ವಾಸ ಎಸ್.ಎಚ್.ನಗರ, ದಯಾಂಬು, ಅಡ್ಯಾರ್, ಕಣ್ಣೂರು, ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಮಂಗಳೂರು| ಪೊಕ್ಸೊ ಕಾಯ್ದೆ ಪ್ರಕರಣ : ಆರೋಪಿ ಮಲತಂದೆಗೆ ಜಾಮೀನು


















