ಮಂಗಳೂರು: ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಡಿಸಿಪಿಯಾಗಿ ಮಿಥುನ್ ಎಚ್.ಎನ್. ಅಧಿಕಾರ ವಹಿಸಿಕೊಂಡಿದ್ದಾರೆ.
ಮಿಥುನ್ ಎಚ್.ಎನ್. ಅವರು ಉಡುಪಿ ಕರಾವಳಿ ಕಾವಲು ಪಡೆಯ ಎಸ್.ಪಿ. ಆಗಿದ್ದರು. ಈ ಹಿಂದೆ ಡಿಸಿಪಿಯಾಗಿದ್ದ ಸಿದ್ದಾರ್ಥ ಗೋಯಲ್ ಅವರಿಗೆ ಭಡ್ತಿ ನೀಡಿ ಬಾಗಲಕೋಟೆ ಎಸ್‌ಪಿಯಾಗಿ ನಿಯುಕ್ತಿ ಮಾಡಲಾಗಿದೆ.
ಅವರ ಸ್ಥಾನಕ್ಕೆ ಜು. 14ರಂದು ನಕ್ಸಲ್ ನಿಗ್ರಹ ಪಡೆಯ ಎಸ್.ಪಿ. ಜಿತೇಂದ್ರ ಕುಮಾರ್ ದಯಾಮ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಗುರುವಾರ ಈ ಆದೇಶವನ್ನು ರದ್ದುಪಡಿಸಿ ಅದೇ ಹುದ್ದೆಯಲ್ಲಿ ಮುಂದುವರಿಸಿದೆ. ಉಳಿದಂತೆ ಮಿಥುನ್ ಅವರನ್ನು ಹೊಸ ಹುದ್ದೆಗೆ ನೇಮಕಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ.