ಮಂಗಳೂರು : ರಾಂಗ್ ಸೈಡ್ ನಿಂದ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಗಂಭೀರ ಗಾಯಗೊಂಡಿದ್ದಾರೆ.ಈ ಘಟನೆ ಬಿ.ಸಿ.ರೋಡ್ ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ.
ವಿಟ್ಲ ಮೂಲದ ನಿವಾಸಿ, ಮಿಫ್ಸ್ ಸಂಸ್ಥೆಯ ವಿದ್ಯಾರ್ಥಿ ಮಿದ್ಲಾಜ್ ಗಂಭೀರ ಗಾಯಗೊಂಡ ಬೈಕ್ ಸವಾರ. ಬೈಕ್ ನಲ್ಲಿದ್ದ ಸಹ ಸವಾರನೂ ಗಾಯಗೊಂಡಿದ್ದು, ಹೆಸರು ತಿಳಿದುಬಂದಿಲ್ಲ.
ಈ ಇಬ್ಬರು ಅಡ್ಯಾರ್‌ನಲ್ಲಿ ಕಾರ್ಯಾಚರಿಸುತ್ತಿರುವ ಮಿಫ್ಸ್ ಸಂಸ್ಥೆಯಲ್ಲಿ ಫೈರ್ ಅಂಡ್ ಸೇಫ್ಟಿ ಕೋರ್ಸ್ ಕಲಿಯುತ್ತಿದ್ದರು. ಎಂದಿನಂತೆ ಕೋರ್ಸ್ ಮುಗಿಸಿ ಅಡ್ಯಾರ್‌ನಿಂದ ವಿಟ್ಲದತ್ತ ಬೈಕ್ ನಲ್ಲಿ ಬರುತ್ತಿದ್ದರು. ಆ ವೇಳೆ ತಲಪಾಡಿಯಲ್ಲಿ ರಾಂಗ್ ಸೈಡ್‌ನಲ್ಲಿ ಅತೀ ವೇಗದಿಂದ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ನಜ್ಜುಗುಜ್ಜಾಗಿದೆ.
ಘಟನೆಯಿಂದ ರಾಷ್ಟ್ರಿಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಪರೀಕ್ಷೆ ಮುಗಿದು 5 ತಿಂಗಳಾದ್ರೂ ಫಲಿತಾಂಶವಿಲ್ಲ : ಗುಲ್ಬರ್ಗ ವಿವಿ ವಿರುದ್ದ B.Ed ವಿದ್ಯಾರ್ಥಿಗಳ ಆಕ್ರೋಶ



















