ಮಂಗಳೂರು: ಕಂಬಳದ ಕರೆಯ ಅಡ್ಡಹಲಗೆ ವಿಭಾಗದ ಚಾಂಪಿಯನ್, ಸುಮಾರು 150ಕ್ಕೂ ಅಧಿಕ ಪದಕ ಪಡೆದ ‘ಬೋಳಾರ ಕುಟ್ಟಿ’ ಕೋಣ ಶುಕ್ರವಾರ ರಾತ್ರಿ ನಿಧನ ಹೊಂದಿದೆ.

ಮಿಂಚಿನ ಓಟದೊಂದಿಗೆ ಕಂಬಳದಲ್ಲಿ ಅಭೂತಪೂರ್ವಪ್ರದರ್ಶನ ನೀಡುತ್ತಿದ್ದ ಕುಟ್ಟಿ ಕೋಣ ತನ್ನದೇ ಆದ ಅಪಾರ ಅಭಿಮಾನಿಗಳನ್ನು ಹೊಂದಿತ್ತು. ಕಳೆದ ವರ್ಷ ಕಂಬಳ ಸಂದರ್ಭ ಅದರ ಕೊಂಬಿಗೆ ಗಾಯವಾಗಿತ್ತು. ವೈದ್ಯರು ಪರೀಕ್ಷಿಸಿದಾಗ ಅನಾರೋಗ್ಯಕ್ಕೀಡಾಗಿರೋದು ದೃಢವಾಗಿತ್ತು. ನಂತರ ತನ್ನ ಓಟವನ್ನು ನಿಲ್ಲಿಸಿತ್ತು.
ತ್ರಿಶಾಲ್.ಕೆ ಪೂಜಾರಿ ಅವರಿಗೆ 50ಕ್ಕೂ ಮಿಕ್ಕಿ ಪದಕಗಳನ್ನು ತಂದುಕೊಟ್ಟ ಕುಟ್ಟಿ ತನ್ನ ಅದ್ಭುತ ಪ್ರದರ್ಶನದ ಮುಖೇನ ತನ್ನ ಮಾಲಕರಿಗೂ ಹೆಮ್ಮೆ ತಂದಿತ್ತು.ಇದೀಗ ಅದರ ನಿಧನಕ್ಕೆ ಕಂಬಳ ಅಭಿಮಾನಿಗಳು. ಮಾಲೀಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಪಡಿತರ ಅಕ್ಕಿ ತುಂಬಿದ ವಾಹನ ಜಪ್ತಿ | ಕಳ್ಳರು ಎಸ್ಕೇಪ್!



















