ಮಂಡ್ಯ : ವಿದೇಶಿ ಕಂಡು ಮಂಡ್ಯ ಜನರು ಮನಸೋತಿದ್ದಾರೆ. ಈ ಟಗರು ಮಂಡ್ಯದ ಕೃಷಿ ಮೇಳದಲ್ಲಿ ಕಂಡುಬಂದಿದೆ.
ಇದು ದಕ್ಷಿಣ ಆಫ್ರಿಕಾ ಮೂಲದ ಡಾರ್ಫರ್ ತಳಿ ಟಗರು ಎನ್ನಲಾಗಿದೆ. ಕೃಷಿ ಮೇಳಕ್ಕೆ ಬಂದ ಟಗರು ರೈತರ ಗಮನ ಸೆಳೆದಿದೆ.
ವಿಜ್ಞಾನಿಗಳು ಮಾಂಸಕ್ಕಾಗಿ ತಳಿ ಅಭಿವೃದ್ಧಿ ಪಡೆಸಿದ್ದಾರೆ ಎಂದು ತಿಳಿದಿದ್ದು, ದಷ್ಟ ಪುಷ್ಟವಾಗಿ ಡಾರ್ಫರ್ ಟಗರು ಕಂಡುಬಂದಿದೆ. ಬಕ್ರೀದ್ ಹಬ್ಬದ ಸಂದರ್ಭ ಆದ್ದರಿಂದ ಬಲೂ ಬೇಡಿಕೆಯನ್ನ ಹೊಂದಿದೆ. ಗಟ್ಟಿ ದೇಹ, ತುಂಬಿದ ತೊಡೆಗಳನ್ನ ಹೊಂದಿರುವ ಡಾರ್ಫರ್ ತಳಿಯ ಟಗರು ರಾಜಸ್ಥಾನ್, ಗುಜರಾತ್, ಕರ್ನಾಟಕದಲ್ಲಿ ಕಾಣಸಿಗುತ್ತದೆ.
ಇದನ್ನೂ ಓದಿ : ಚಿತ್ರದುರ್ಗದಲ್ಲಿ ಸಾಮೂಹಿಕ ವಿವಾಹ | ದಾಂಪತ್ಯ ಜೀವನಕ್ಕೆ ಕಾಲಿಟ್ಟ 1008ಕ್ಕೂ ಅಧಿಕ ಜೋಡಿಗಳು



















