ಬೈಂದೂರು : ನಮ್ಮ ಸಮಾಜದಲ್ಲಿ ಸೇವೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಹಣ ಬಲವಿದ್ದರೆ ಮಾತ್ರ ಸೇವೆ ಮಾಡಲು ಸಾಧ್ಯವೆಂಬ ಮನೋಭಾವವನ್ನು ತೊಡೆದು ಹಾಕಬೇಕು, ಸಮಾಜಕ್ಕೆ ನಮ್ಮಿಂದ ಸಾಧ್ಯವಾಗುವ ಸೇವೆಯನ್ನು ಸಲ್ಲಿಸಿದರೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.

ಸಮೃದ್ಧ ಬೈಂದೂರು ಪರಿಕಲ್ಪನೆಯ ಸೇವಾಸೇತು ಯೋಜನೆಯಡಿಯಲ್ಲಿ ಸೇವಾ ಭಾರತಿ ಕನ್ನಾಡಿ ಸಂಸ್ಥೆಯ ಸಹಯೋಗದಲ್ಲಿ ಬೈಂದೂರಿನ ಹೇನಬೇರುವಿನಲ್ಲಿ ಬೆನ್ನಹುರಿ ಅಪಘಾತಕ್ಕೊಳಗಾದವನ ಮನಚೇತನ ಕೇಂದ್ರ ಸೇವಾಧಾಮದ ಪ್ರವೇಶೋತ್ಸವದ ಪೂಜಾ ಕಾರ್ಯಗಳ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಬೆನ್ನುಹುರಿ ಅಪಘಾತಕ್ಕೊಳಗಾದವರನ್ನು ಗುರುತಿಸಿ, ದ್ವಿತೀಯ ಹಂತದ ತೊಡಕುಗಳನ್ನು ತಡೆಗಟ್ಟಿ, ಅಗತ್ಯ ವೈದ್ಯಕೀಯ ನೆರವನ್ನು ನೀಡಿ ದಿವ್ಯಾಂಗರಲ್ಲಿ ಹಾಗೂ ಅವರ ಕುಟುಂಬದವರಲ್ಲಿ ಆತ್ಮವಿಶ್ವಾಸವನ್ನು ತುಂಬಿಸುವುದು. ಸ್ತಾವಲಂಬಿ ಬದುಕಿಗೆ ಅಗತ್ಯವಾದ ವ್ಯಕ್ತಿ ಕೌಶಲಗಳನ್ನು ನೀಡಿ, ಚಲನಶೀಲತೆಯನ್ನು ಹಚ್ಚಿಸುವ ಮೂಲಕ ಸಮಾಜದೊಂದಿಗೆ ಪುನರ್ ಸಂಯೋಜನೆ ಮಾಡುವುದು ಹಾಗೂ ಹಾಗೂ ಜೀವನೋಪಾಯದ ಬೆಂಬಲದ ಮೂಲಕ ಆರೋಗ್ಯಕರ ಹಾಗೂ ಗೌರವಾನ್ವಿತ ಜೀವನವನ್ನು ನಡೆಸುವಂತೆ ಸಬಲೀಕರಣಗೊಳಿಸುವುದು ನಮ್ಮ ಮೊದಲ ಗುರಿಯಾಗಿದೆ ಎಂದರು.
ವಿವಿಧ ಯೋಜನೆ :
ಕಳೆದ 7 ವರ್ಷಗಳಲ್ಲಿ 768 ಮಂದಿ ದಿವ್ಯಾಂಗರಿಗೆ ಸಮುದಾಯಾಧರಿತ ಉಚಿತ ಸೇವೆಗಳನ್ನು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಕೊಡಗು, ಹಾಸನ ಜಿಲ್ಲೆಗಳಲ್ಲಿ ಒದಗಿಸುವ ಮೂಲಕ್ಕೆ, ಅವರಿಗೆ ಸೂಕ್ತ ಸಲಹೆ ಸೂಚನೆ, ಸಾಧನಾ ಸಲಕರಣೆ, ವೈದ್ಯಕೀಯ ಕಿಟ್, ಫಿಸಿಯೋಥೆರಪಿ, ಗಾಲಿಕುರ್ಚಿ ಕೌಶಲ್ಯ, ದಿವ್ಯಾಂಗ ಸ್ನೇಹಿ ಶೌಚಾಲಯ, ಲ್ಯಾಂಪ್, ಸ್ವ-ಉದ್ಯೋಗಕ್ಕೆ ಬೆಂಬಲ ಮತ್ತು ಆರ್ಥಿಕ ನೆರವು ನೀಡಿ ಅವರ ಜೀವನ ಸುಲಭ ಸಾಧ್ಯವಾಗಲು ಕಾರಣಕರ್ತವಾಗಿದೆ. ಅತೀ ಕಡಿಮೆ ದರದಲ್ಲಿ ಕೇಂದ್ರಾಭರಿತ ಪುನಶ್ವೇತನದ ಮೂಲಕ 249 ಮಂದಿ ದಿವ್ಯಾಂಗರಿಗೆ 2 ರಿಂದ 3 ತಿಂಗಳು ಫಿಸಿಯೋಥೆರಪಿ, ಒತ್ತುಪೇಶನಲ್ ಥೆರಪಿ ಮತ್ತು ಜೀವನ ಕೌಶಲ್ಯದ ತರಬೇತಿಯ ಮೂಲಕ ದಿವ್ಯಾಂಗರು ಮತ್ತೆ ಸಮಾಜದಲ್ಲಿ ಭರವಸೆಯ ಜೀವನ ನಡೆಸುವಂತಾಗಿದೆ.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸುರೇಶ ಬಟ್ಟಾಡಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್. ಕೆ., ಶಾಸಕರ ಧರ್ಮಪತ್ನಿ ಅನುರಾಧ ಗುರುರಾಜ್ ಶೆಟ್ಟಿ ಗಂಟಿಹೊಳೆ, ಸೇವಾಭಾರತಿ ಟ್ರಸ್ಟ್ ಅಧ್ಯಕ್ಷ ಕೆ. ವಿನಾಯಕ ರಾಜ್, ಸೇವಾಭಾರತಿ ಟ್ರಸ್ಟ್ ಕಾರ್ಯದರ್ಶಿ ಸ್ವರ್ಣಗೌರಿ, ಟ್ರಸ್ಟಿ ಬಾಲಕೃಷ್ಣ, ಉದ್ಯಮಿ ಯು. ಪಾಂಡುರ0ಗ ಪಡಿಯಾರ್, ಟೀಮ್ ದುಡ್ಮಿಯ ಸಿಇಓ ಶೋಧನ್ ಮಲ್ಪೆ, ಟೀಮ್ ದುಡ್ಮಿಯ ಸಂಯೋಜಕ ದಿನಕರ್ ಹಾಗೂ ಮೊದಲಾದವರು ಇದ್ದರು.
ಇದನ್ನೂ ಓದಿ : ನಿಗಮ ಮಂಡಳಿ ಅಧ್ಯಕ್ಷರ ‘ಸಚಿವ’ ಸ್ಥಾನಮಾನ ಕೂಡಲೇ ವಾಪಸ್ ಪಡೆಯಬೇಕು | ಆರ್.ಅಶೋಕ್ ಆಗ್ರಹ!



















