ಬೆಂಗಳೂರು: ಬ್ಯಾಂಕ್ ಉದ್ಯೋಗಿಯೊಬ್ಬರು ಆನ್ ಲೈನ್ ರಮ್ಮಿ ಗೀಳಿಗೆ ಬಿದ್ದು 20 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
ಬ್ಯಾಂಕ್ ನಲ್ಲೇ ಸಾಲ ಮಾಡಿ ಅದರ ಇಎಂಐ ಕಟ್ಟಲು ಆಗದೆ ಈಗ ಮನೆ ತೊರೆದು ಹೋಗಿದ್ದಾರೆ ಎನ್ನಲಾಗಿದೆ. ನಗರದ ಮುದ್ದಿನಪಾಳ್ಯದಲ್ಲಿ ಈ ಘಟನೆ ನಡೆದಿದೆ. ಭರತ್ ನಾಪತ್ತೆಯಾದ ವ್ಯಕ್ತಿ ಎನ್ನಲಾಗಿದೆ. ಈ ವ್ಯಕ್ತಿ ಆನ್ ಲೈನ್ ರಮ್ಮಿ ಆಡಲು ಬ್ಯಾಂಕ್ ನಿಂದ 20 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಆದರೆ, ಇಎಂಐ ಕಟ್ಟಲು ಸಾಧ್ಯವಾಗದಿದ್ದಕ್ಕೆ ವಿಡಿಯೋ ಮಾಡಿ ಮನೆ ತೊರೆದು ಹೋಗಿದ್ದಾನೆ ಎನ್ನಲಾಗಿದೆ.
ಈ ಕುರಿತು ಸೆಲ್ಫಿ ವಿಡಿಯೋ ಮಾಡಿರುವ ಭರತ್, ನಾನು ಜೀವನದಲ್ಲಿ ಸೋತಿದ್ದೇನೆ. ನನ್ನನ್ನು ಹುಡುಕಬೇಡಿ. ನಾನು ಮನೆಬಿಟ್ಟು ಹೋಗುತ್ತಿದ್ದೇನೆಂದು ವಿಡಿಯೋ ಮಾಡಿ, ಮೊಬೈಲ್ ಮನೆಯಲ್ಲೇ ಬಿಟ್ಟು ಕಾಣೆಯಾಗಿದ್ದಾನೆ. ಈಗ ಭರತ್ ಪತ್ನಿ ಚೈತ್ರಾ ಎಂಬುವವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದು, ಪತಿ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.