ಮೈಸೂರು : ಮೈಸೂರಿನಲ್ಲಿ ನರಭಕ್ಷಕ ಹುಲಿ ಜೊತೆ ಎರಡು ಮರಿಗಳನ್ನು ತಡರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.
ಮೈಸೂರಿನ ಮುಳ್ಳೂರು ಬಳಿಯ ಬೆಣ್ಣೆಗೆರೆ ಎಂಬಲ್ಲಿ ಹುಲಿ ಸೆರೆಯಾಗಿದೆ. ಇದರೊಂದಿಗೆ ಎರಡು ಮರಿಗಳು ಸಿಕ್ಕಿದ್ದು, ಇನ್ನೊಂದು ಮರಿಗಾಗಿ ಕಾರ್ಯಚರಣೆ ಮುಂದುವರೆದಿದೆ.
ಈ ಹಿಂದೆ ರಾಜಶೇಖರ್ ಎಂಬಾತನನ್ನು ಬಲಿ ಪಡೆದಿದ್ದ ಹುಲಿ ನಿನ್ನೆ ತಡರಾತ್ರಿ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ವಶಪಡೆದಿದೆ. ಇದರಿಂದ ಗ್ರಾಮದ ಜನರು ನಿಟ್ಟೂಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : ನ.26ರಿಂದ ದತ್ತಪೀಠದಲ್ಲಿ ದತ್ತ ಜಯಂತಿ ಸಂಭ್ರಮ | ಲಾಂಗ್ ಚಾರ್ಸಿ ವಾಹನಗಳಿಗೆ ನೋ ಎಂಟ್ರಿ!



















