ವ್ಯಕ್ತಿಯೊಬ್ಬರು ಬರೋಬ್ಬರಿ 49 ಕೋಟಿ ರೂ. ಕೊಟ್ಟು ನಾಯಿ ಖರೀದಿಸಿ, ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಬೆಂಗಳೂರು ಮೂಲದ ಎಸ್. ಸತೀಶ್ 4.4 ಮಿಲಿಯನ್ ಪೌಂಡ್ ಅಂದರೆ, 49 ಕೋಟಿ ರೂ. ಕೊಟ್ಟು ಅತ್ಯಂತ ಅಪರೂಪದ ತೋಳ ನಾಯಿ ಖರೀದಿಸಿದ್ದಾರೆ. ಇದನ್ನು ವುಲ್ಫ್ ಡಾಗ್ ಅಂದರೆ, ಕ್ಯಾಡಬಾಮ್ ಒಕಾಮಿ ಎಂದು ಕರೆಯಲ್ಪಡುವ ಈ ವಿಶಿಷ್ಟ ನಾಯಿ, ತೋಳ ಮತ್ತು ಕಕೇಶಿಯನ್ ಶೆಫರ್ಡ್ ನಡುವಿನ ಮಿಶ್ರತಳಿಯಾಗಿದೆ. ಈ ಬ್ರೀಡ್ ನ ಮೊದಲನೆ ನಾಯಿಯಿದು ಎನ್ನಲಾಗಿದೆ.ಇದನ್ನು ಖರೀದಿಸುವ ಮೂಲಕ ಬೆಂಗಳೂರಿನ ವ್ಯಕ್ತಿ ಎಸ್. ಸತೀಶ್ ಜಗತ್ತಿನ ಅತಿ ದುಬಾರಿ ನಾಯಿಯ ಒಡೆಯ ಎಂಬ ಖ್ಯಾತಿ ಗಳಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜನಿಸಿದ ಕ್ಯಾಡಬಾಮ್ ಒಕಾಮಿ ಈಗಾಗಲೇ ಭಾರತ ಪ್ರವೇಶಿಸಿದೆ. ಈ ನಾಯಿ ಕೇವಲ 8 ತಿಂಗಳಲ್ಲಿ 75 ಕಿ.ಗ್ರಾಂನಷ್ಟು ತೂಕ ಪಡೆಯಲಿದೆ. ಇದಕ್ಕೆ ಹಸಿವು ಜಾಸ್ತಿ. ಪ್ರತಿದಿನ ಸುಮಾರು 3 ಕೆಜಿ ಹಸಿ ಮಾಂಸ ತಿನ್ನುತ್ತದೆ. ಕಾಡು ತೋಳದ ಹೋಲಿಕೆ ಹೆಚ್ಚಾಗಿರುವ ಈ ನಾಯಿ ನೋಡಲು ದೈತ್ಯವಾಗಿರುತ್ತದೆ.
ಎಸ್ ಸತೀಶ್ ಬೆಂಗಳೂರಿನ ಪ್ರಸಿದ್ಧ ಶ್ವಾನ ತಳಿಗಾರ. ಅವರು 150ಕ್ಕೂ ಹೆಚ್ಚು ವಿವಿಧ ತಳಿಗಳ ನಾಯಿಗಳನ್ನು ಹೊಂದಿದ್ದಾರೆ. ಕ್ಯಾಡಬಾಮ್ ಒಕಾಮಿ ಎಂಬ ಅಪರೂಪದ “ವುಲ್ಫ್ ಡಾಗ್”ಗಾಗಿ ಸುಮಾರು 50 ಕೋಟಿ ರೂ.ಗಳನ್ನು ಖರ್ಚು ಮಾಡುವ ಮೂಲಕ ಸುದ್ದಿ ಆಗಿದ್ದಾರೆ. ಈಗ ಇದು 8 ತಿಂಗಳ ನಾಯಿ ಆದರೂ 75 ಕೆಜಿ ತೂಕವಿದ್ದು, 30 ಇಂಚು ಎತ್ತರವಿದೆ.