ಹುಬ್ಬಳ್ಳಿ | ಕೇಶ್ವಾಪುರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿದವನನ್ನ ಬಂಧಿಸಿದ್ದಾರೆ. ಸಯ್ಯದ್ ಅಲಿ ಬಂಧಿತ ಕಳ್ಳ.
ಗದಗ ಜಿಲ್ಲೆಯ ಲಕ್ಷೇಶ್ವರ ತಾಲೂಕಿನ ಹುಲೂರ ಗ್ರಾಮದ ನಿವಾಸಿಯಾಗಿರುವ ಸಯ್ಯದ್ ಅಲಿ, ಮೋಜು ಮಸ್ತಿ ಮಾಡಲು ಹೈ-ರೇಂಜ್ ರಾಯಲ್ ಎನ್ಫೀಲ್ಡ್ ಬೈಕ್‌ಗಳನ್ನೇ ಕಳ್ಳತನ ಮಾಡುತ್ತಿದ್ದ. ಸದ್ಯ ಆತನನ್ನು ಬಂಧಿಸಿರುವ ಪೊಲೀಸರು, ಒಟ್ಟು 12 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಸಯ್ಯದ್ ಅಲಿ ಮೆಕ್ಯಾನಿಕ್ ಕೆಲಸ ಮಾಡುತ್ತಾ ಕಳ್ಳತನ ದಂಧೆಗೆ ಇಳಿದಿದ್ದ ಎಂದು ತನಿಖೆ ವೇಳೆ ಬಯಲಾಗಿದೆ. ಘಟನಾ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಖದೀಮರ ಕೈಚಳಕ | ಅರ್ಧ ಕೆ.ಜಿ ಚಿನ್ನಾಭರಣ ದೋಚಿ ಪರಾರಿ!



















