ನವದೆಹಲಿ: ರೈಲಿನಲ್ಲಿ ಮಲಗಿದ್ದ ಯುವಕನೊಬ್ಬನಿಗೆ ಸಹ ಪುರುಷ ಪ್ರಯಾಣಿಕನೊಬ್ಬ ಚುಂಬಿಸಿರುವ ಪ್ರಕರಣ ನಡೆದಿದ್ದು, ತನ್ನ ಮೇಲಾದ ಕೃತ್ಯದ ಬಗ್ಗೆ ಯುವಕನು ಹೇಳಿಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral News ) ಆಗಿದೆ.
The guy kissed another guy in train while sleeping.
— ShoneeKapoor (@ShoneeKapoor) March 4, 2025
Then said- "maaf kardo, chhod de"
All the bystanders are not even taking this seriously until the man started to get beaten. pic.twitter.com/YtQP3P7cG2
ಮೇಲಿನ ಬರ್ತ್ನಲ್ಲಿ ಮಲಗಿದ್ದ ವ್ಯಕ್ತಿಗೆ, ಕೆಳಗಿನ ಬರ್ತ್ನಲ್ಲಿ ಮಲಗಿದ್ದ ವ್ಯಕ್ತಿ ಏಕಾಏಕಿ ಬಂದು ಮುತ್ತು ಕೊಟ್ಟಿದ್ದಾನೆ. ಜೊತೆಗೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. “ಮುತ್ತು ಕೊಡಬೇಕು ಅನಿಸಿತು. ಅದಕ್ಕಾಗಿ ಕೊಟ್ಟೆ” ಎಂದಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ, ಮುತ್ತು ಕೊಟ್ಟ ಅಪರಾಧಕ್ಕಾಗಿ ಆ ವ್ಯಕ್ತಿಯನ್ನು ಥಳಿಸುತ್ತಿರುವುದನ್ನು ಕಾಣಬಹುದು.
ಮುತ್ತು ಕೊಡಿಸಿಕೊಂಡ ವ್ಯಕ್ತಿ, ಪ್ರಯಾಣಿಕರ ಮುಂದೆ ತನಗೆ ಆಗಿರುವ ಅನ್ಯಾಯವನ್ನು ತೋಡಿಕೊಂಡಿದ್ದಾನೆ. ಜನರೆಲ್ಲರೂ ಕುತೂಹಲದಿಂದ ಅವರನ್ನು ಸುತ್ತುವರಿದು ನೋಡುತ್ತಿವುದನ್ನು ಕಾಣಬಹುದಾಗಿದೆ. ಮುತ್ತು ಕೊಟ್ಟವನ ಪತ್ನಿಯು ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸುತ್ತಿರುವುದೂ ಕಾಣಿಸುತ್ತಿದೆ. ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಆಕೆ ಅವಲತ್ತುಕೊಂಡಿದ್ದಾಳೆ.
ಇದನ್ನೂ ಓದಿ: Gold Scam: 90 ದಿನಗಳಲ್ಲಿ 25 ಕೋಟಿ ರೂ. ಪಾವತಿಸಿ ಅಥವಾ ಜೈಲಿಗೆ ಹೋಗಿ: ಚಿನ್ನದ ಹಗರಣದ ಆರೋಪಿಗೆ ಸುಪ್ರೀಂ ಕೋರ್ಟ್
“ಇಲ್ಲಿಯೇ ಕುಳಿತಿದ್ದ ಈ ವ್ಯಕ್ತಿ, ನಾನು ಮಲಗಿದ್ದಾಗ ನನ್ನನ್ನು ಬಲವಂತವಾಗಿ ಬಂದು ಚುಂಬಿಸಿದ್ದಾನೆ. ಇದು ಎಲ್ಲರ ಮುಂದೆ ನಡೆದಿದೆ. ಆದರೆ ಯಾರೂ ನನ್ನ ಬೆಂಬಲಕ್ಕೆ ಬರುತ್ತಿಲ್ಲ.ನನ್ನ ಸ್ಥಾನದಲ್ಲಿ ಒಬ್ಬ ಮಹಿಳೆ ಇದ್ದಿದ್ದರೆ ಜನರ ಪ್ರತಿಕ್ರಿಯೆ ಹೇಗಿರುತ್ತಿತ್ತು, ನಿಮ್ಮ ಹೆಂಡತಿಗೆ ಇದು ಸಂಭವಿಸಿದ್ದರೆ, ನೀವು ಅದನ್ನು ಬಿಟ್ಟುಬಿಡಿ ಎಂದು ಹೇಳುತ್ತಿದ್ದಿರಾ? ಎಂದೂ ಆತ ಮರು ಪಶ್ನೆ ಹಾಕಿದ್ದಾನೆ.
ಇತರ ಪ್ರಯಾಣಿಕರು ಬೆಂಬಲ ನೀಡುತ್ತಿಲ್ಲ ಎಂಬ ಹತಾಶೆಯಿಂದ ಸಿಟ್ಟಾಗಿದ್ದ ಆ ವ್ಯಕ್ತಿ ಆರೋಪಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆತನ ಕಾಲರ್ ಹಿಡಿದು ಎಳೆದುಕೊಂಡು ಹೋಗಿದ್ದಾನೆ. ಜೊತೆಗೆ ಅನೇಕ ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ಆದರೆ, ಆತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೋ ಇಲ್ಲವೋ ಎಂಬುದು ದೃಢಪಟ್ಟಿಲ್ಲ.