ಬೆಂಗಳೂರು : ಐಪಿಎಲ್ ಪಂದ್ಯಗಳ ಫ್ರೀ ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಅವರು KSCA ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್ಮೆಂಟ್ ಪದಾಧಿಕಾರಿಗಳ ಜೊತೆ ಇಂದು ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ಓರ್ವ ಶಾಸಕನಿಗೆ ಮೂರು ಫ್ರೀ ಐಪಿಎಲ್ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ.
ಈ ಮೊದಲು 1 ಪ್ಲಸ್ 1 ಒಟ್ಟು ಎರಡು ಫ್ರೀ ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು. ಆದ್ರೆ, ಇಂದಿನ ಸಭೆಯಲ್ಲಿ ಇನ್ನೊಂದು ಟಿಕೆಟ್ ಹೆಚ್ಚಳ ಮಾಡಲಾಗಿದ್ದು, ಅಂತಿಮವಾಗಿ ಒಬ್ಬ ಎಂಎಲ್ಎಗೆ ಒಟ್ಟು 3 ಟಿಕೆಟ್ಗಳನ್ನು ನೀಡಲು ಒಪ್ಪಂದವಾಗಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ
ಇಂದು ನಡೆದ ಸಭೆಯಲ್ಲಿ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಆರ್ಸಿಬಿ ಪದಾಧಿಕಾರಿಗಳು ಭಾಗಿಯಾಗಿದ್ದು, ಐಪಿಎಲ್ ಟಿಕೆಟ್ ಹಾಗೂ ಸ್ಟೇಡಿಯಂ ಬಗ್ಗೆ ಡಿಸಿಎಂ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಇನ್ಮುಂದೆ ಎಂಎಲ್ಎಗಳಿಗೆ ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯದ ಮೂರು ಟಿಕೆಟ್ ಹಾಗೂ ಇಂಟರ್ನ್ಯಾಷಲ್ ಮ್ಯಾಚ್ಗೆ ಎರಡು ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ.
ಇನ್ನು, ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಿಇಒ, ಡಿಕೆ ಶಿವಕುಮಾರ್ಗೆ ಆರ್ಸಿಬಿ ಜರ್ಸಿ ಗಿಫ್ಟ್ ನೀಡಿದ್ದು, ಜರ್ಸಿಯನ್ನು ಧರಿಸಿ ಫೋಟೋಗೆ ಡಿಕೆಶಿ ಪೋಸ್ ನೀಡಿದ್ದಾರೆ.
ಇದನ್ನೂ ಓದಿ : ಕಾಂಪೌಂಡ್ ಹಾರಿ ಶಿವಮೊಗ್ಗ ಏರ್ಪೋರ್ಟ್ಗೆ ನುಗ್ಗಿದ ‘ಜಾಂಬವಂತ’ನ ಸೆರೆ!


















