ಬೆಂಗಳೂರು: ರಾಜ್ಯದಲ್ಲಿನ ಮಕ್ಕಳಲ್ಲಿ ಅಪೌಷ್ಟಿಕತೆ ಇರಬಾರದು ಎಂಬ ಕಾರಣಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಕೆಲವು ಜಿಲ್ಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದಿದೆ. ಇದು ಆತಂಕದ ವಿಷಯವಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಹಾಗೂ ಕಲಬುರಗಿ ಜಿಲ್ಲೆಯ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಕ್ಕಳಲ್ಲಿ ಅಪೌಷ್ಟಿಕತೆ ಗಂಭೀರ ಸಮಸ್ಯೆಯಾಗಿದೆ. ಇದಕ್ಕಾಗಿ ಮಾತೃಪೂರ್ಣ ಯೋಜನೆ ಜಾರಿಯಲ್ಲಿದೆ. ಅಲ್ಲದೆ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಆದರೂ ಇದು ನಿಯಂತ್ರಣಕ್ಕೆ ಬಾರದಿರುವುದು ನೋವಿನ ಸಂಗತಿ.
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಮಾಣ?
ರಾಯಚೂರು
ಸಾಧಾರಣಾ ಅಪೌಷ್ಟಿಕ ಮಕ್ಕಳು – 11818, ತೀವ್ರ ಅಪೌಷ್ಟಿಕ – 2317
ಕಲಬುರ್ಗಿ
ಸಾಧಾರಣಾ ಅಪೌಷ್ಟಿಕ ಮಕ್ಕಳು – 10944, ತೀವ್ರ ಅಪೌಷ್ಟಿಕ – 2732
ಬಳ್ಳಾರಿ
ಸಾಧಾರಣಾ ಅಪೌಷ್ಟಿಕ ಮಕ್ಕಳು – 4077 – ತೀವ್ರ ಅಪೌಷ್ಟಿಕ – 871
ಬೀದರ್
ಸಾಧಾರಣಾ ಅಪೌಷ್ಟಿಕ ಮಕ್ಕಳು – 6129, ತೀವ್ರ ಅಪೌಷ್ಟಿಕ – 867
ಕೊಪ್ಪಳ
ಸಾಧಾರಣಾ ಅಪೌಷ್ಟಿಕ ಮಕ್ಕಳು – 3934, ತೀವ್ರ ಅಪೌಷ್ಟಿಕ – 360
ವಿಜಯ ನಗರ
ಸಾಧಾರಣಾ ಅಪೌಷ್ಟಿಕ ಮಕ್ಕಳು- 5353, ತೀವ್ರ ಅಪೌಷ್ಟಿಕ – 1201
ಯಾದಗಿರಿ
ಸಾಧಾರಣಾ ಅಪೌಷ್ಟಿಕ ಮಕ್ಕಳು – 5033, ತೀವ್ರ ಅಪೌಷ್ಟಿಕ – 608