ಬಿಗ್ ಬಾಸ್ ಮನೆಯಿಂದ ಮಾತಿನ ಮಲ್ಲಿ ಮಲ್ಲಮ್ಮ ಔಟ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ವೈಯಕ್ತಿಕ ಕಾರಣದಿಂದ ಮಲ್ಲಮ್ಮ ಬಿಗ್ ಬಾಸ್ ಮನೆಯನ್ನು ತೊರೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈಗ ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆಗಿದ್ದಾರೆ.

ಆರಂಭದಲ್ಲಿ ಮಲ್ಲಮ್ಮ ಅವರಿಗೆ ಟಾಸ್ಕ್ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಅಷ್ಟೇ ಅಲ್ಲದೇ ಟಾಸ್ಕ್ ಸಮಯದಲ್ಲಿ ಮನೆಯ ಸದಸ್ಯರು ಅವರನ್ನು ಅಷ್ಟಾಗಿ ಪರಿಗಣಿಸುತ್ತಿರಲಿಲ್ಲ. ಈ ವಿಚಾರದ ಬಗ್ಗೆ ಸುದೀಪ್ ಅವರು ಮನೆ ಮಂದಿಯನ್ನು ಕ್ಲಾಸ್ ತೆಗೆದುಕೊಂಡಿದ್ದರು.
ಮಲ್ಲಮ್ಮ ಹೆಚ್ಚಾಗಿ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಜೊತೆ ಒಳ್ಳೆಯ ಒಡನಾಟದಲ್ಲಿದ್ದರು. ಈ ವಾರದ ಟಾಸ್ಕ್‌ನಲ್ಲೂ ಅವರು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಶನಿವಾರ ಸುದೀಪ್ ಜೊತೆ ಮಾತನಾಡುತ್ತಿದ್ದಾಗ ನಾನು ಕಾಲೇಜಿಗೆ ಹೋಗಿರಲಿಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ದರು.
ಇದನ್ನೂ ಓದಿ : ಮಂಡ್ಯ | ವಿಸಿ ನಾಲೆಗೆ ಬಿದ್ದ ಕ್ರೇಟಾ ಕಾರು, ಚಾಲಕ ಪ್ರಾಣಾಪಾಯದಿಂದ ಪಾರು



















