ದಾವಣಗೆರೆ: ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆ, ದಾವಣಗೆರೆ ಜಿಲ್ಲೆಯ ಹರಿಹರದ ಬಳಿ ಹರಿಯುವ ತುಂಗಭದ್ರ ನದಿಯು ಮೈದುಂಬಿ ಹರಿಯುತ್ತಿರುವ ಮನಮೋಹಕ ದೃಶ್ಯವನ್ನು ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ.
ತುಂಗಾ ಆರತಿ ಮಂಟಪದ ಮೆಟ್ಟಿಲುಗಳು ಸಂಪೂರ್ಣ ಮುಳುಗಡೆಯಾಗಿದ್ದು, ತುಂಗಾ ಡ್ಯಾಂನಿಂದ 75,532 ಕ್ಯೂಸೆಕ್, ಭದ್ರಾ ಡ್ಯಾಂನಿಂದ 38,342 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ.
ಪ್ರವಾಸಿ ತಾಣವಾದ ಹಿನ್ನೆಲೆ ಪ್ರತಿನಿತ್ಯ ಮೈದುಂಬಿ ಹರಿಯುವ ತುಂಗಭದ್ರಾದ ಹರಿವನ್ನು ನೋಡಲು ಜನರ ದಂಡೇ ಆಗಮಿಸುತ್ತಿದೆ.
ಇನ್ನು, ನದಿ ಪಾತ್ರದ ಜನರು ನದಿಗೆ ಇಳಿಯದಂತೆ ಹಾಗೂ ಜಾನುವಾರುಗಳನ್ನು ನದಿದಡದಲ್ಲಿ ಮೇಯಿಸಲು ಹೋಗದಂತೆ ತಾಲೂಕು ಆಡಳಿತ ಸೂಚನೆ ನೀಡಿದೆ.



















