ರಾಮನಗರ: ಮಾಲಾಧಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ಅಯ್ಯಪ್ಪ ದೇವಸ್ಥಾನದ ಹತ್ತಿರ ನಡೆದಿದೆ.
ಕೇರಳದ (Kerala) ಶಬರಿಮಲೆ (Sabarimala) ಅಯ್ಯಪ್ಪ ದೇವಸ್ಥಾನ (Ayyappa Temple)ದ ಹತ್ತಿರ ಇರುವ ಮಲ್ಲಿಕ್ ಪುರಂ ಮೇಲ್ಸೇತುವೆ ಮೇಲಿಂದ ಜಿಗಿದು ಕನಕಪುರ ಮೂಲದ ಅಯ್ಯಪ್ಪ ಮಾಲಾಧಾರಿ ಸಾವನ್ನಪ್ಪಿದ್ದಾರೆ.
ಕನಕಪುರದ ನಿವಾಸಿ ಕುಮಾರಸ್ವಾಮಿ (40) ಸಾವನ್ನಪ್ಪಿರುವ ಅಯ್ಯಪ್ಪ ಮಾಲಾಧಾರಿ. ಇವರು ಕಳೆದ ಮೂರು ದಿನಗಳಿಂದ ಶಬರಿಮಲೆಗೆ ತೆರಳಿದ್ದರು. ಆದರೆ, ಸೋಮವಾರ ಸಂಜೆ ದೇವಸ್ಥಾನದ ಸನ್ನಿಧಾನದಿಂದ ಮಲ್ಲಿಕ್ ಪುರಂಗೆ ಸಂಪರ್ಕಿಸುವ ಮೇಲ್ಸೇತುವೆ ಮೇಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಳಗೆ ಬಿದ್ದ ರಭಸಕ್ಕೆ ಅವರ ಕೈ ಮತ್ತು ಕಾಲಿಗೆ ಗಾಯವಾಗಿತ್ತು. ಕೂಡಲೇ ಆವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕುಮಾರಸ್ವಾಮಿ ಅವರ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.