ಹಾಸನ: ಬಡವರು ಮಕ್ಕಳು ಬೆಳೀಬೇಕು ಎಂಬ ಡೈಲಾಗ್ ಮೂಲಕ ಖ್ಯಾತಿ ಹೊಂದಿದ್ದ ನಟ ಡಾಲಿ ಧನಂಜಯ್ ಕನ್ನಡ ಶಾಲೆಗಳು ಮುಚ್ಚಬಾರದು, ಬಡವರ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂದು ಹೇಳಿದ್ದಾರೆ.

ತಮ್ಮ ಹುಟ್ಟೂರು ಅರಸೀಕೆರೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ, ಊರಿನ ಜನರ ಮಧ್ಯೆ ನಿಂತು ಕನ್ನಡ ಹಾಗೂ ಬಡವರ ಪರ ಮಾತನಾಡಿದ ಧನಂಜಯ್, ಕನ್ನಡ ಶಾಲೆಗಳು ಯಾವತ್ತು ಮುಚ್ಚಬಾರದು. ನಿಮ್ಮೂರಿನ ಕನ್ನಡ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಿ ಎಂದು ಕರೆ ನೀಡಿದ್ದಾರೆ.

ಇಂದು ಪೋಷಕರು ಬೇರೆ ಬೇರೆ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ. ಎಲ್ಲಾ ಹಳ್ಳಿಗಳಿಗೂ, ಊರಿಗಳಿಗೂ ಬಸ್ ಬಂದು ಮಕ್ಕಳನ್ನು ಶಾಲೆಗಳಿಗೆ ಕರೆದುಕೊಂಡು ಹೋಗುತ್ತವೆ. ಆದರೆ ಬೇರೆ ಶಾಲೆಗಳಿಗೆ ಮಕ್ಕಳನ್ನು ಕಳಿಸಲಾಗದ ಪೋಷಕರು ಇದ್ದೆ ಇರುತ್ತಾರೆ. ಕನ್ನಡ ಶಾಲೆಯಲ್ಲಿ 5 ,10, ಮಕ್ಕಳಿರಲಿ, ಎರಡು ಮಕ್ಕಳಿರಲಿ, ಒಂದೇ ಮಗುವಿರಲಿ ಆ ಒಂದು ಮಗು ಸಹ ಶಿಕ್ಷಣದಿಂದ ವಂಚಿತನಾಗಬಾರದು. ಇಬ್ಬರು ಮಕ್ಕಳಿದ್ದು ಆ ಹುಡುಗರು ಎಜುಕೇಟೇಡ್ ಆದರೆ ಮುಂದೆ ಆ ಕುಟುಂಬಕ್ಕೆ ಆಸ್ತಿಯಾಗುತ್ತಾರೆ ಎಂದು ಬಡವರ ಮಕ್ಕಳ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನು, ಬಾಲ್ಯದ ಎಲ್ಲಾ ಸ್ನೇಹಿತರ ಹೆಸರು ಹೇಳಿ ಸರಳತೆ, ಸ್ನೇಹದ ಮೌಲ್ಯ ಸಾರಿದ ಡಾಲಿ ಧನಂಜಯ್ , ಬ್ರಿಗೇಡ್ ಹೆಸರಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಸಿದ್ದ ಡಾಲಿ ಬಾಲ್ಯದ ಗೆಳೆಯರು ಕಾರ್ಯಕ್ರಮ ನಂತರ ಶಾಸಕ ಶಿವಲಿಂಗೇಗೌಡ ಹಾಗೂ ಡಾಲಿ ಸ್ನೇಹಿತರು ನಟ ಧನಂಜಯ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಸಮಂತಾ-ರಾಜ್ ವಿವಾಹ : ಏನಿದು ಪವಿತ್ರ ‘ಭೂತ ಶುದ್ಧಿ ವಿವಾಹ’ ಸಂಸ್ಕಾರ?



















