ಮುಂಬೈ, ಮಾರ್ಚ್ 17, 2025: ಭಾರತದ ಪ್ರಮುಖ ಎಸ್‌ಯುವಿ ತಯಾರಕರಾದ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಕಂಪನಿಯು ಇಂದು ಎಕ್ಸ್‌ಯುವಿ 700 ಎಬೊನಿ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಆವೃತ್ತಿಯು ಎಕ್ಸ್‌ಯುವಿ 700ನ ಅದ್ಭುತ ರೋಡ್ ಪ್ರೆಸೆನ್ಸ್ ಮತ್ತು ಸೊಗಸಾದ ವಿನ್ಯಾಸದ ಉತ್ಕೃಷ್ಟ ಆವೃತ್ತಿ ಆಗಿದ್ದು, ಗಮನ ಸೆಳೆಯುವ ಹೊಸ ಆಕರ್ಷಕ ರೂಪವನ್ನು ಹೊಂದಿದೆ. ಈ ವಿಶೇಷ ಆವೃತ್ತಿಯ ಆರಂಭಿಕ ಬೆಲೆ ₹ 19.64 ಲಕ್ಷ (ಎಕ್ಸ್-ಶೋರೂಮ್). ಈ ಆವೃತ್ತಿಯು ಕಪ್ಪು ಮತ್ತು ಬೆಳ್ಳಿ ಬಣ್ಣಗಳ ಸಂಯೋಜನೆ ಹೊಂದಿದ್ದು, ಕಣ್ಮನ ಸೆಳೆಯುವಂತೆ ಮೂಡಿ ಬಂದಿದೆ.
ಬೋಲ್ಡ್ ಮತ್ತು ಅತ್ಯಾಕರ್ಷಕ ಹೊರಾಂಗಣ
ಸಾಮಾನ್ಯವಾಗಿ ಯಾವುದಕ್ಕೂ ಮರುಳಾಗದವರಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಈ ಮಹೀಂದ್ರಾ ಎಕ್ಸ್‌ಯುವಿ 700 ಎಬೊನಿ ಎಡಿಷನ್ ಹೊರಾಂಗಣದಲ್ಲಿ ಗಾಢ ಕಪ್ಪು ಬಣ್ಣವನ್ನು ಹೊಂದಿದ್ದು, ಜತೆಗೆ ಬೆಳ್ಳಿ ಬಣ್ಣವನ್ನು ಕೂಡ ಹೊಂದಿದೆ. ಕಪ್ಪು ಗ್ರಿಲ್ ಮತ್ತು ಕಪ್ಪು ಓ ಆರ್ ವಿ ಎಂ ಗಳು ಮುಂಭಾಗದ ಅದ್ದೂರಿತನವನ್ನು ಮತ್ತಷ್ಟು ಹೆಚ್ಚಿಸಿದೆ. ಜೊತೆಗೆ ಆರ್18 ಬ್ಲಾಕ್ ಅಲಾಯ್ ಚಕ್ರಗಳು ಎಸ್‌ಯುವಿಯ ಆಕರ್ಷಕ ನಿಲುವಿಗೆ ಸೊಗಸನ್ನು ಒದಗಿಸಿವೆ. ಕಪ್ಪು ಮತ್ತು ಬೆಳ್ಳಿ ಬಣ್ಣಗಳ ಸೂಕ್ಷ್ಮ ಸಂಯೋಜನೆಯು ಎಕ್ಸ್‌ಯುವಿ 700 ನ ವಿಶಿಷ್ಟ ವಿನ್ಯಾಸವನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಅದ್ಭುತ ರೋಡ್ ಪ್ರೆಸೆನ್ಸ್ ಅನ್ನು ಹೊಂದಿದ್ದು, ಎಲ್ಲಾ ರೀತಿಯ ರಸ್ತೆಗಳಲ್ಲೂ ಗತ್ತಿನಿಂದ ಸಾಗುವಂತೆ ರೂಪುಗೊಂಡಿದೆ.

ಸೊಗಸಾದ ಒಳಾಂಗಣ ಮತ್ತು ಹೆಚ್ಚು ಅನುಕೂಲತೆ
ಕಾರಿನ ಒಳಗೆ ಪ್ರವೇಶಿಸಿದಾಗ, ನೀವು ಬೋಲ್ಡ್ ಆಗಿರುವ ಮತ್ತು ಸುಂದರವಾದ ಕ್ಯಾಬಿನ್ ವಿನ್ಯಾಸವನ್ನು ಕಾಣುತ್ತೀರಿ. ಕಪ್ಪು ಲೆದರ್ ಒಳಪದರ, ಕಪ್ಪು ಟ್ರಿಮ್ ಗಳು ಮತ್ತು ಸೆಂಟರ್ ಕನ್ಸೋಲ್ ಹಾಗೂ ಬಾಗಿಲು ಫಲಕಗಳಲ್ಲಿ ಬೆಳ್ಳಿ ಆಕ್ಸೆಂಟ್ ಗಳು ಈ ಕಾನಿ ಒಳಾಂಗಣವನ್ನು ಮತ್ತಷ್ಟು ಸೊಗಸಾಗಿಸಿವೆ. ತಿಳಿ ಬೂದು ಬಣ್ಣದ ಛಾವಣಿಯು ಡ್ಯುಯಲ್ ಟೋನ್ ಥೀಮ್ ಹೊಂದಿದ್ದು, ಒಳಾಂಗಣದ ಚಂದವನ್ನು ಮತ್ತಷ್ಟು ಜಾಸ್ತಿ ಮಾಡಿದೆ. ಇದೇ ರೀತಿ, ಡಾರ್ಕ್- ಕ್ರೋಮ್ ಏರ್ ವೆಂಟ್ ಗಳು ಎಬೊನಿ ಎಡಿಷನ್ ನ ಪ್ರೀಮಿಯಂ ಗುಣವನ್ನು ಮತ್ತಷ್ಟು ಹೆಚ್ಚಿಸಿವೆ. ಈ ಎಕ್ಸ್ ಯು ವಿ 700 ಎಬೊನಿ ಎಡಿಷನ್ ಆಧುನಿಕತೆ, ಐಷಾರಾಮಿತನ ಮತ್ತು ಸೌಂದರ್ಯದ ಸಂಯೋಜನೆಯಾಗಿದ್ದು, ಗ್ರಾಹಕರಿಗೆ ಹೆಚ್ಚು ಅನುಕೂಲತೆ ಒದಗಿಸುತ್ತದೆ.
ಆತ್ಮವಿಶ್ವಾಸಿ ಗ್ರಾಹಕರಿಗಾಗಿ ರೂಪಿಸಲಾಗಿರುವ ಎಸ್ ಯು ವಿ
ಮಹೀಂದ್ರಾದ ಧ್ಯೇಯಕ್ಕೆ ಅನುಗುಣವಾಗಿ ಎಕ್ಸ್‌ಯುವಿ 700 ಎಬೊನಿ ಎಡಿಷನ್ ಅತ್ಯುತ್ತಮ ಎಸ್ ಯು ವಿ ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಸೀಮಿತ ಆವೃತ್ತಿಯು ಉತ್ತಮ ಸ್ಟೈಲ್ ಮತ್ತು ನವೀನ ತಂತ್ರಜ್ಞಾನವನ್ನು ಮೆಚ್ಚುವ ವ್ಯಕ್ತಿಗಳಿಗೆ ಸೂಕ್ತವಾಗಿದೆ. ವಾರಾಂತ್ಯದ ಅಡ್ವೆಂಚರ್ ಗಳಿಂದ ಹಿಡಿದು ವಾರದ ದಿನಗಳ ದೈನಂದಿನ ಪ್ರಯಾಣಗಳವರೆಗೆ ಎಬೊನಿ ಎಡಿಷನ್ ಎಲ್ಲಾ ರೀತಿಯ ಪ್ರಯಾಣಕ್ಕೂ ಸೂಕ್ತವಾಗಿದ್ದು, ಗ್ರಾಹಕರಿಗೆ ಉತ್ತಮ ಸೌಲಭ್ಯ, ಭಾರಿ ಸಾಮರ್ಥ್ಯ ಮತ್ತು ಆಕರ್ಷಕ ವಿನ್ಯಾಸವನ್ನು ಸಂಯೋಜಿಸುವ ಉನ್ನತ ಮಟ್ಟದ ಎಸ್‌ಯುವಿ ಅನುಭವವನ್ನು ಒದಗಿಸುತ್ತದೆ.
ಮಹೀಂದ್ರಾ ಎಕ್ಸ್‌ಯುವಿ 700 ಕುರಿತು
2021ರಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್‌ಯುವಿ 700 ತನ್ನ ದೃಢವಾದ ಲುಕ್, ಅತ್ಯುತ್ತಮ ಕಾರ್ಯಕ್ಷಮತೆ, ವಿಶ್ವದರ್ಜೆಯ ಸುರಕ್ಷತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದುವ ಮೂಲಕ ಎಸ್‌ಯುವಿ ಜಗತ್ತಿನಲ್ಲಿ ಸಂಚಲನ ಮೂಡಿಸಿತ್ತು. ಎಕ್ಸ್ ಯು ವಿ 700 ಬಿಡುಗಡೆಯಾದ 43 ತಿಂಗಳಲ್ಲಿ 250,000 ಯೂನಿಟ್ ಗಳನ್ನು ಮಾರಾಟ ಮಾಡಿ ಸಾಧನೆ ಮಾಡಿತ್ತು ಮತ್ತು ಎಕ್ಸ್‌ಯುವಿ 700 ಈ ವಿಭಾಗದಲ್ಲಿ ಕಾರ್ಯಕ್ಷಮತೆ ಮತ್ತು ನಾವೀನ್ಯತೆಗೆ ಹೊಸ ಮಾನದಂಡವನ್ನು ಹಾಕಿಕೊಟ್ಟಿತ್ತು. ಇದೀಗ ಬಿಡುಗಡೆ ಆಗಿರುವ ಹೊಸ ಎಬೊನಿ ಎಡಿಷನ್ ಈ ಪರಂಪರೆಯನ್ನು ಮುಂದುವರಿಸುತ್ತದೆ ಮತ್ತು ಅದ್ಭುತವಾದ ಮತ್ತು ಸೊಗಸಾದ ಚಾಲನಾ ಅನುಭವವನ್ನು ಒದಗಿಸುತ್ತದೆ.