ಬೆಂಗಳೂರು: ದೇಶದಲ್ಲಿ ಕಾರು ತಯಾರಿಕೆಗೆ ಹೆಸರಾಗಿರುವ ಆಟೋಮೊಬೈಲ್ ದೈತ್ಯ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್ ಕಂಪನಿಯು 2025-26ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ ಘೋಷಣೆ ಮಾಡಿದೆ. ಮಹೀಂದ್ರಾ ಎಂಪವರ್ ಹರ್ (EmpowerHer) ಸ್ಕಾಲರ್ ಶಿಪ್ ಪ್ರೋಗ್ರಾಂಅನ್ನು (Mahindra EmpowerHer Scholarship Program 2025-26) ಘೋಷಣೆ ಮಾಡಲಾಗಿದ್ದು, 9ರಿಂದ 12ನೇ ತರಗತಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಬಡ ಪ್ರತಿಭಾನ್ವಿತ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿ ಎಂದು ಸ್ಕಾಲರ್ ಶಿಪ್ ನೀಡಲಾಗುತ್ತದೆ. ಮೆರಿಟ್ ಆಧಾರದ ಮೇಲೆ ಆಯ್ಕೆಯಾದವರಿಗೆ ಸ್ಥಿರ 5,500 ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಯಾರೆಲ್ಲ ಅರ್ಹರು? ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ ಎಂಬುದರ ಮಾಹಿತಿ ಇಲ್ಲಿದೆ.
ಅರ್ಹತೆಗಳು ಏನೇನು?
- ಹಿಂದಿನ ಶೈಕ್ಷಣಿಕ ವರ್ಷ ಅಥವಾ ಸೆಮಿಸ್ಟರ್ ನಲ್ಲಿ ಕನಿಷ್ಠ ಶೇ.50ರಷ್ಟು ಮಾರ್ಕ್ಸ್ ಪಡೆದಿರಬೇಕು.
- ಕುಟುಂಬದ ವಾರ್ಷಿಕ ಆದಾಯ ಮಿತಿ 4 ಲಕ್ಷ ರೂಫಾಯಿ ಅಥವಾ ಅದಕ್ಕಿಂತ ಕಡಿಮೆ ಇರಬೇಕು
- ಮಹೀಂದ್ರಾ & ಮಹೀಂದ್ರಾ ಅಥವಾ ಬಡ್ಡಿ4ಸ್ಟಡಿ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸುವಂತಿಲ್ಲ.
- ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿನಿಯರು ತಮ್ಮ ಹಿಂದಿನ ಸೆಮಿಸ್ಟರ್ ಅಥವಾ ವರ್ಷದ ಅಂಕಪಟ್ಟಿ ಸಲ್ಲಿಸಿ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಸಲು ಬಯಸುವವರು https://www.buddy4study.com/ ಗೆ ಭೇಟಿ ನೀಡಿ, ಲಾಗಿನ್ ಆಗಬೇಕು. ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿಗಳನ್ನು ಸಲ್ಲಿಸಬಹುದು. ಇತ್ತೀಚಿನ ಪಾಸ್ ಪೋರ್ಟ್ ಸೈಜಿನ ಫೋಟೊ, ಕೋರ್ಸ್ ಪ್ರವೇಶಾತಿಯ ದಾಖಲೆ, ಅಂಕಪಟ್ಟಿ, ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರ ಸೇರಿ ಹಲವು ದಾಖಲೆಗಳು ಬೇಕಾಗುತ್ತವೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ : ಎಟಿಎಂಗಳಲ್ಲಿ ಡೆಬಿಟ್ ಕಾರ್ಡ್ ಇಲ್ಲದೆಯೇ ಹಣ ವಿತ್ ಡ್ರಾ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ



















