ಬೆಂಗಳೂರು: ಭಾರತದ ಪ್ರಮುಖ ಫ್ಯಾಷನ್ ತಾಣ ರಿಲಯನ್ಸ್ ಟ್ರೆಂಡ್ಸ್ ಹೊಸ ಸಮ್ಮರ್-ಒಕೇಶನ್ ಉಡುಪು ಕಲೆಕ್ಷನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಕಲೆಕ್ಷನ್‌ನಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಅವರ ಪುತ್ರಿ ಸಿತಾರಾ ಕಾಣಿಸಿಕೊಂಡಿದ್ದಾರೆ. ಈ ಬೇಸಿಗೆ ಮತ್ತು ರಜೆ ಸೀಸನ್‌ನಲ್ಲಿ ಕುಟುಂಬದ ಎಲ್ಲರಿಗೂ ಹೊಂದಿಕೆಯಾಗುವ ಉಡುಪುಗಳು ಈ ಕಲೆಕ್ಷನ್‌ನಲ್ಲಿವೆ.
ಈ ಹೊಸ ಕಲೆಕ್ಷನ್ ಅನ್ನು ಪ್ರಚಾರ ಮಾಡುವುದಕ್ಕಾಗಿ ರಿಲಯನ್ಸ್ ಟ್ರೆಂಡ್ಸ್ ಹೊಸ ಅಭಿಯಾನ ‘ನ್ಯೂ ಟೈಮ್ಸ್. ನ್ಯೂ ಟ್ರೆಂಡ್ಸ್’ ಎಂಬ ಥೀಮ್ ಅನ್ನು ಸೃಜಿಸಿದೆ. ಹೊಸ ಕಲೆಕ್ಷನ್‌ನಲ್ಲಿರುವ ಉಡುಪುಗಳನ್ನು ಪ್ರದರ್ಶಿಸಲಾಗುತ್ತದೆ. ಅಲ್ಲದೆ, ಬ್ರ್ಯಾಂಡ್‌ನ ಹೊಸ ಲುಕ್, ಫೀಲ್ ಮತ್ತು ಆಟಿಟ್ಯೂಡ್ ಅನ್ನು ಇದು ಪ್ರದರ್ಶಿಸಲಿದೆ.
ಅಷ್ಟೇ ಅಲ್ಲ, ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಅವರ ಪುತ್ರಿ ಸಿತಾರಾ ಅವರನ್ನೊಳಗೊಂಡ ಹೊಸ ವೀಡಿಯೋ ಜಾಹೀರಾತನ್ನೂ ಕೂಡಾ ಬಿಡುಗಡೆ ಮಾಡಿದೆ. ಇದರಲ್ಲಿ ಕೂಲ್ ಕಲೆಕ್ಷನ್ಸ್, ವಾವ್ ವೆಸ್ಟರ್ನ್ಸ್ ಮತ್ತು ಪಾರ್ಟಿ ಎಥ್ನಿಕ್ಸ್ ಕಲೆಕ್ಷನ್‌ಗಳನ್ನು ಪ್ರದರ್ಶಿಸಲಾಗಿದೆ.
ಹೊಸ ಕಲೆಕ್ಷನ್‌ನಲ್ಲಿ ಭಾರತದ ಸಾಂಪ್ರದಾಯಿಕ ಶ್ರೀಮಂತಿಕೆಯು ಪ್ರದರ್ಶನಗೊಂಡಿದೆ. ಬೇಸಿಗೆ ಮತ್ತು ರಜೆಗಾಗಿ ವಿಶಿಷ್ಟ ಶಾಪಿಂಗ್ ಅನುಭವವನ್ನು ಇದು ನೀಡಲಿದೆ. ಅಷ್ಟೇ ಅಲ್ಲ, ಇಡೀ ವರ್ಷವೂ ರಿಲಯನ್ಸ್ ಟ್ರೆಂಡ್‌ನಲ್ಲಿ ಶಾಪಿಂಗ್ ಮಾಡುವುದಕ್ಕೆ ಅತ್ಯಂತ ಆಹ್ಲಾದಕರವಾಗಿರುತ್ತದೆ. ಯಾಕೆಂದರೆ, ಇಲ್ಲಿ ವಿವಿಧ ಶ್ರೇಣಿಯ ಕಲೆಕ್ಷನ್‌ಗಳಿದ್ದು, ಎಲ್ಲ ಸನ್ನಿವೇಶ ಮತ್ತು ಸೀಸನ್‌ಗೆ ಸೂಕ್ತವಾದ ಉಡುಪುಗಳಿವೆ.
ಉತ್ತಮ ಗುಣಮಟ್ಟ ಹಾಗೂ ಅನ್ವೇಷಣೆಗೆ ಹೆಚ್ಚಿನ ಒತ್ತು ನೀಡಿರುವ ರಿಲಯನ್ಸ್ ಟ್ರೆಂಡ್ಸ್ ಫ್ಯಾಷನ್ ಉದ್ಯಮದಲ್ಲಿ ಹೊಸ ಮಾನದಂಡವನ್ನು ನಿರ್ಮಿಸಿದೆ. ರಿಲಯನ್ಸ್ ಸ್ಟೋರ್‌ನಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳ ವಿಭಾಗದಲ್ಲಿ, ಆಧುನಿಕ ಹಾಗೂ ಸಾಂಪ್ರದಾಯಿಕ ಸೇರಿದಂತೆ ವಿವಿಧ ರೀತಿಯ ಉಡುಪುಗಳಿವೆ.