ಬೆಳಗಾವಿ : ಬೆಳಗಾವಿಯಲ್ಲಿ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಅದ್ದೂರಿಯಾಗಿದ್ದು, ದಕ್ಷಿಣದ ಕಾಶಿ ಎಂದೇ ಸುಪ್ರಸಿದ್ಧ ಪಡೆದ ನಗರದ ಕಪಿಲೇಶ್ವರ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ.
ದೇವಸ್ಥಾನದಲ್ಲಿ ಮಧ್ಯರಾತ್ರಿಯಿಂದಲೇ ಪೂಜಾ ಕಾರ್ಯಗಳು ನಡೆಯುತ್ತಿದೆ. ಶಿವ ಮತ್ತು ಹರ ಮೂರ್ತಿಗಳು ಮುಖಾಮುಖಿಯಾಗಿರೋ ಈ ದೇವಸ್ಥಾನ, ಪಂಚಾಮೃತ, ಮಹಾರುದ್ರಾಭಿಷೇಕದಂತಹ ಹಲವು ಪೂಜೆಗಳು ದೇವರಿಗೆ ಸಮರ್ಪಿಸಲಾಗುತ್ತಿದೆ.
ಸರದಿ ಸಾಲಿನಲ್ಲಿ ನಿಂತುಕೊಂಡು ಭಕ್ತರು ಶಿವನ ದರ್ಶನ ಪಡೆಯುತ್ತಿದ್ದು, ರಾತ್ರಿಯಿಂದಲೇ ಲಕ್ಷಾಂತರ ಭಕ್ತರು ಬಂದು ಆಶೀರ್ವಾದ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಮಂತ್ರಾಲಯದಲ್ಲಿ ಶಿವರಾತ್ರಿ ಸಂಭ್ರಮ | ಸುಬುಧೇಂದ್ರ ತೀರ್ಥ ಶ್ರೀಗಳಿಂದ ಶಿವನಿಗೆ ಮಹಾರುದ್ರಾಭಿಷೇಕ



















