ಗದಗ : ಗದಗದ ಐತಿಹಾಸಿಕ ಶ್ರೀ ತ್ರಿಕೂಟೇಶ್ವರ ದೇವಸ್ಥಾನಲ್ಲಿ ಮಹಾಶಿವರಾತ್ರಿ ಸಂಭ್ರಮ ಮನೆಮಾಡಿದ್ದು, ಅನೇಕ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.
ಬೆಳಿಗ್ಗೆಯಿಂದ ಸಾವಿರಾರು ಭಕ್ತರು ಶ್ರೀ ತ್ರಿಕೂಟೇಶ್ವರನ ದರ್ಶನ ಪಡೆಯುತ್ತಿದ್ದಾರೆ. ಇದು ಐತಿಹಾಸಿಕ ಹಾಗೂ ಬೇಡಿದ ವರಗಳನ್ನು ಈಡೇರಿಸುವ ಇಷ್ಟಾರ್ಥ ದೇವರುಗಳಾಗಿವೆ.
ಈ ದೇವಸ್ಥಾನದ ವಿಶೇಷ ಅಂದ್ರೆ ಒಂದೆ ಪಾಣಿ ಬಟ್ಟಲಿನಲ್ಲಿ ಬ್ರಹ್ಮ-ವಿಷ್ಣು-ಮಹೇಶ್ವರ, ಸೃಷ್ಟಿ, ಸ್ಥಿತಿ, ಲಯ ಎಂಬ ತ್ರಿಲಿಂಗ ಉದ್ಭವ ಲಿಂಗಗಳಿವೆ. ಜೊತೆಗೆ ಸಾವಿತ್ರಿ-ಸರಸ್ವತಿ-ಗಾಯತ್ರಿ ದೇವತೆಗಳು ಒಂದೆ ಗರ್ಭಗುಡಿಯಲ್ಲಿ ಪ್ರತಿಷ್ಟಾಪಿಸಲಾಗಿದೆ. ಆದ್ದರಿಂದ ಈ ಐತಿಹಾಸಿಕ ದೇವಸ್ಥಾನಕ್ಕೆ ಗದಗ ಅಷ್ಟೇ ಅಲ್ಲಾ ಸುತ್ತಮುತ್ತಲಿನ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಮಹಾ ಶಿವರಾತ್ರಿ ಅಂಗವಾಗಿ ಬಿಲ್ವಾರ್ಚನೆ, ಕ್ಷೀರಾಭಿಷೇಕ, ಎಳೆ ನೀರು ಅಭಿಷೇಕ, ರುದ್ರಾಭಿಷೇಕ, ಲಘು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಯಾಮ ಪೂಜೆ, ಮಹಾ ಮಂಗಳಾರತಿ ಹೀಗೆ ಅನೇಕ ವಿಶೇಷ ಪೂಜೆಗಳು ನಡೆಯಲಿವೆ. ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಶಿವರಾತ್ರಿಯಂದೇ ದುಷ್ಕರ್ಮಿಗಳ ಅಟ್ಟಹಾಸ | ಐತಿಹಾಸಿಕ ದೇವಸ್ಥಾನದ ಶಿವಲಿಂಗ, ನಂದಿ ಮೂರ್ತಿ ಧ್ವಂಸ!



















