ಭಾಷೆ ಹೆಸರಿನಲ್ಲಿ ಮತ್ತೆ ಮಹಾರಾಷ್ಟ್ರ, ಕರ್ನಾಟಕದ ಅಸ್ಮಿತೆಗೆ ಪೆಟ್ಟು ನೀಡುವ ಮಾತುಗಳನ್ನಾಡಿದೆ. ಕಾರವಾರ ಮಹಾರಾಷ್ಟ್ರದ ಅವಿಭಾಜ್ಯ ಅಂಗ ಅಂತಾ ಈ ಬಾರಿ ಡಿಸಿಎಂ ಅಜಿತ್ ಪವಾರ್ ಕ್ಯಾತೆ ತೆಗೆದಿದ್ದಾರೆ.
ಮರಾಠಿ ಭಾಷಿಕರೇ ಹೆಚ್ಚಿರುವ ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದಿದ್ದಾರೆ. 1960ರಲ್ಲಿ ಹಲವರ ಹೋರಾಟದ ಫಲವಾಗಿ ಮಹಾರಾಷ್ಟ್ರ ಅಸ್ತಿತ್ವಕ್ಕೆ ಬಂತು. ಆದರೆ ಅಂದಿನ ನಾಯಕರ ಹೋರಾಟದ ಕನಸು ಇಂದಿಗೂ ಪೂರ್ಣಗೊಂಡಿಲ್ಲ. ಮರಾಠಿ ಭಾಷಿಕರೇ ಹೆಚ್ಚಿರುವ ಬೆಳಗಾವಿ, ಕಾರವಾರ, ನಿಪ್ಪಾಣಿ ಕರ್ನಾಟಕದಿಂದ ಬೇರ್ಪಟ್ಟಾಗಲೇ ಪರಿಪೂರ್ಣ ಮಹಾರಾಷ್ಟ್ರ ನಿರ್ಮಾಣವಾಗುವುದು ಎಂದಿದ್ದಾರೆ.
ಈಗಾಗಲೇ ಪ್ರಕರಣ ಕೋರ್ಟ್ ನಲ್ಲಿದ್ದು, ಮಹಾರಾಷ್ಟ್ರಕ್ಕೇ ನ್ಯಾಯ ಸಿಗಲಿದೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿರುವ ಅಜಿತ್ ಪವಾರ್, ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುವ ಕೆಲಸಕ್ಕೆ ಕೈಹಾಕಿದ್ದಾರೆ.