ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವು ಕೊನೆಯ ಹಂತವಾಗಿದೆ. ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಬುಧವಾರ ಕೋಟ್ಯಂತರ ಜನ ಪುಣ್ಯಸ್ನಾನ ಮಾಡುತ್ತಿದ್ದಾರೆ. ಬುಧವಾರವೇ ಕುಂಭಮೇಳವು ಸಂಪನ್ನಗೊಳ್ಳುವ ಕಾರಣ ಹೆಚ್ಚಿನ ಆಗಮಿಸಿದ್ದಾರೆ. ಇನ್ನು ಬಾಲಿವುಡ್ ನಟಿ ಪ್ರೀತಿ ಜಿಂಟಾ (Maha Kumbh 2025) ಅವರು ಕೂಡ ಬುಧವಾರ ಪುಣ್ಯಸ್ನಾನ ಮಾಡಿದ್ದಾರೆ. ಇದರೊಂದಿಗೆ ನಟಿಯು (Preiti Zinta) ಕುಂಭಮೇಳದಲ್ಲಿ ಒಟ್ಟು ಮೂರು ಬಾರಿ ಪುಣ್ಯಸ್ನಾನ ಮಾಡಿದಂತಾಗಿದೆ.
ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ಇನ್ ಸ್ಟಾಗ್ರಾಂನಲ್ಲಿ ಪ್ರೀತಿ ಜಿಂಟಾ ವೀಡಿಯೋ ಪೋಸ್ಟ್ ಮಾಡಿದ್ದಾರೆ. “ಮಹಾ ಕುಂಭಮೇಳದಲ್ಲಿ ಮೂರನೇ ಬಾರಿಗೆ ಮಿಂದೆದಿದ್ದೇನೆ. ಇದು ನನ್ನಲ್ಲಿ ವಿನೀತ ಭಾವವನ್ನು ಮೂಡಿಸಿದೆ. ನನ್ನ ಹೃದಯ ತುಂಬಿಬಂದಿದೆ. ಅದರಲ್ಲೂ, ನನ್ನ ತಾಯಿ ಜತೆ ತೆರಳಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿರುವುದು ಸಾರ್ಥಕತೆ ಮೂಡಿಸಿದೆ” ಎಂದು ಪ್ರೀತಿ ಜಿಂಟಾ ಪೋಸ್ಟ್ ಮಾಡಿದ್ದಾರೆ.
ಧಾರ್ಮಿಕ ಭಾವನೆಗಳು ಈಗ ನನ್ನಲ್ಲಿ ಮೇಳೈಸಿವೆ. ನಾವು ಮನುಷ್ಯರು ಎಂಬ ಚಿಂತನೆಗೇ ಇಲ್ಲಿ ಬೇರೆ ಅರ್ಥ ಬರುತ್ತದೆ. ಪುಣ್ಯಸ್ನಾನ ಮಾಡಿದ ಬಳಿಕ ನನ್ನಲ್ಲಿ ಆತ್ಮವಿಶ್ವಾಸ ಮೂಡಿದೆ. ಇದೇ ಅನುಭೂತಿ ಹಾಗೂ ಅನುಭವದಲ್ಲಿ ನಾನು ಜೀವನ ಸಾಗಿಸುತ್ತೇನೆ ಎಂದು ಪ್ರೀತಿ ಜಿಂಟಾ ಭಾವುಕರಾಗಿ ಬರೆದುಕೊಂಡಿದ್ದಾರೆ.
ಮಹಾ ಕುಂಭಮೇಳವು ಬುಧವಾರ ಸಮಾರೋಪಗೊಳ್ಳಲಿದ್ದು, ಇದುವರೆಗೆ 60 ಕೋಟಿಗೂ ಅಧಿಕ ಮಂದಿ ಸ್ನಾನ ಮಾಡಿದ್ದಾರೆ. ಕೊನೆಯ ದಿನ ಕೋಟ್ಯಂತರ ಜನ ಆಗಮಿಸುತ್ತಿರುವ ಕಾರಣ ಬಿಗಿ ಬಂದೋಬಸ್ತ್, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಬಾಲಿವುಡ್ ನಟ-ನಟಿಯರು, ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿ ಸಾವಿರಾರು ಗಣ್ಯರು ಕೂಡ ಪುಣ್ಯಸ್ನಾನ ಮಾಡಿದ್ದಾರೆ.