ದಾವಣಗೆರೆ: ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಕೊರತೆ ಇದ್ದು, ನೇಮಕಾತಿ ಮಾಡಿ ಎಂದು ಉದ್ಯೋಗಾಂಕ್ಷಿಗಳು ಆಗ್ರಹಿಸುತ್ತಲೇ ಇದ್ದಾರೆ. ಇದರ ಬೆನ್ನಲ್ಲೇ, ಸರ್ಕಾರಿ ಶಿಕ್ಷಕರಾಗಲು ಬಯಸುವ ಆಕಾಂಕ್ಷಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಸಿಹಿ ಸುದ್ದಿ ನೀಡಿದ್ದಾರೆ. ನನ್ನ ಅವಧಿಯಲ್ಲಿ 25 ಸಾವಿರ ಶಿಕ್ಷಕರ ನೇಮಕಾತಿ ಮಾಡಲು ಬದ್ಧನಾಗಿದ್ದೇನೆ ಎಂದು ಅವರು ದಾವಣಗೆರೆ ಜಿಲ್ಲೆಯ ಹುಚ್ಚಂಗಿಪುರ ಗ್ರಾಮದಲ್ಲಿ ಹೇಳಿದ್ದಾರೆ.
ಈಗಾಗಲೇ ಸುಮಾರು 13,500 ಸರ್ಕಾರಿ ಶಾಲಾ ಶಿಕ್ಷ ಕರ ನೇಮಕಾತಿಗೆ ಆರ್ಥಿಕ ಅನುಮೋದನೆ ಪಡೆಯಲಾಗಿದೆ. ನನ್ನ ಅವಧಿಯಲ್ಲಿಕಲ್ಯಾಣ ಕರ್ನಾಟಕವೂ ಸೇರಿ 25 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ನಾನು ಬದ್ಧ ಎಂದು ಹೇಳಿದ್ದಾರೆ. ಇದರಿಂದಾಗಿ ಆಕಾಂಕ್ಷಿಗಳಲ್ಲಿ ಹೊಸ ಆಸೆ, ಭರವಸೆ ಚಿಗುರಿದಂತಾಗಿದೆ.
ಗ್ರಂಥಾಲಯಗಳು ಶಿಕ್ಷ ಕ ರಹಿತ ವಿಶ್ವವಿದ್ಯಾಲಯಗಳು ಇದ್ದಂತೆ. ಪ್ರತಿ ಗ್ರಾಮಗಳಲ್ಲಿ ಗ್ರಂಥಾಲಯಗಳ ನಿರ್ಮಾಣ ಮಾಡುವ ಕುರಿತು ವಿಧಾನಸೌಧದಲ್ಲಿ ಚರ್ಚಿಸಲಾಗುವುದು. ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರ ಬೇಡಿಕೆಯಂತೆ ಶಾಲಾ ಕಟ್ಟಡ ಅಭಿವೃದ್ಧಿಗೆ 25 ಲಕ್ಷ ರೂ. ಅನುದಾನ ಒದಗಿಸಲು ಬದ್ಧನಾಗಿರುವೆ ಎಂದು ಕೂಡ ಹೇಳಿದರು.
ವರದಿಗಳ ಪ್ರಕಾರ ರಾಜ್ಯದಲ್ಲಿ 59 ಸಾವಿರ ಸರ್ಕಾರಿ ಶಿಕ್ಷಕರ ಕೊರತೆ ಇದೆ ಎಂದು ತಿಳಿದುಬಂದಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿಯೇ 50 ಸಾವಿರ ಶಿಕ್ಷಕರ ಕೊರತೆ ಇದ್ದರೆ, 9 ಸಾವಿರ ಪ್ರೌಢಶಾಲೆಗಳಲ್ಲಿ ಬೋಧಿಸಲು ಶಿಕ್ಷಕರಿಲ್ಲ ಎಂದು ತಿಳಿದುಬಂದಿದೆ.