ಮಂಡ್ಯ: ಕಳೆದ 3 ದಿನಗಳಿಂದ ಕೋಮು ಸಂಘರ್ಷಕ್ಕೆ ಹೊತ್ತು ಉರಿದಿದ್ದ ಮದ್ದೂರು ಇಂದು ಯಥಾಸ್ಥಿತಿಗೆ ಮರಳಿದೆ.
ಎಂದಿನಂತೆ ದೈನಂದಿನ ಚಟುವಟಿಕೆಯಲ್ಲಿ ಜನ ಭಾಗಿಯಾಗಿದ್ದಾರೆ, ರಸ್ತೆಯಲ್ಲಿ ಜನರ ಓಡಾಟ, ಅಂಗಡಿ ಮುಂಗಟ್ಟುಗಳು ತೆರೆಯಲಾಗಿದೆ.
ಪೊಲೀಸ್ ಇಲಾಖೆಯು ಕೊಂಚ ಭದ್ರತೆಯನ್ನು ಸಡಿಲಿಸಿದ್ದು, ಮಸೀದಿ ಬಳಿ ಭದ್ರತೆ ಮುಂದುವರೆದಿದೆ. ಯಾವುದೇ ರೀತಿ ಅಹಿತಕರ ಘಟನೆ ಜರುಗದಂತೆ ಪೊಲೀಸರ ಕಟ್ಟೆಚ್ಚರ ವಹಿಸಿದ್ದಾರೆ.