ಬೆಂಗಳೂರು: ಭದ್ರಾವತಿಯಾಗಲಿ, ಸಾಗರವಾಗಲಿ, ನಾಗಮಂಗಲ ಇರಲಿ, ಮದ್ದೂರು ಇರಲಿ ಯಾವುದನ್ನು ಬಿಡಿಬಿಡಿಯಾಗಿ ನೋಡಬಾರದು. ಇದರ ಹಿಂದಿರುವ ಮಾನಸಿಕತೆ ನೋಡಬೇಕು ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ರವಿ, ಅಂಬೇಡ್ಕರ್ ಅವರು ಮುಸ್ಲಿಂ ಮಾನಸಿಕತೆ ಬಗ್ಗೆ ಬರೆದಿದ್ದಾರೆ. ಮುಸ್ಲಿಮರು ಎಂದಿಗೂ ಒಂದಾಗಿ ಬಾಳಲು ಸಾಧ್ಯವಿಲ್ಲ. ಇನ್ನೊಂದು ಧರ್ಮವನ್ನು ಮುಸಲ್ಮಾನರು ಸಹಿಸುವುದಿಲ್ಲ. ಓಟಿನ ಆಸೆಗೆ ಸರ್ಕಾರ ಕಣ್ಣಿದ್ದೂ ಕುರುಡಾಗಿದೆ. ಎಳೆ ಮಕ್ಕಳನ್ನು ಮನಸ್ಸಿನಲ್ಲಿ ಉಗಿಯುವ ವಿಷ ಬೀಜ ತುಂಬಿದ್ದಾರೆ ಎಂದು ಅಸಮಧಾನ ಹೊರ ಹಾಕಿದ್ದಾರೆ.
ಅಲ್ಲಾ ಒಬ್ಬನೇ ದೇವರು, ಇನ್ನೊಂದು ದೇವರ ಅಸ್ತಿತ್ವವನ್ನು ಮುಸ್ಲೀಮರು ಒಪ್ಪಿಕೊಳ್ಳುವುದಿಲ್ಲ. ಆದರೆ ದುರ್ವೈವದ ಸಂಗತಿ ಎಂದರೆ ಇಸ್ಲಾಂ ಎಂದರೆ ಶಾಂತಿ, ಎಂದು ನಮ್ಮ ಸಿಎಂ ಹೇಳುತ್ತಾರೆ. ಇಸ್ಲಾಂ ಬೆಳೆದಿದ್ದೆ ಕತ್ತಿಯ ಮೂಲಕ ನನ್ನನ್ನು ಬೇಕಾದರೆ ಕೋರ್ಟ್ ಗೆ ಎಳೆಯಲಿ, ಇಸ್ಲಾಂ ನಲ್ಲಿ ಮಹಿಳಾ ಸ್ವಾತಂತ್ರ್ಯವೇ ಇಲ್ಲ. ಮತದ ಆಸೆಗೆ ಸರ್ಕಾರದಿಂದ ಮತಾಂದರಿಗೆ ಕುಮ್ಮಕ್ಕು ಕೊಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಮಂಡ್ಯದಂತಹ ಪ್ರದೇಶದಲ್ಲಿ ಇದೊಂದು ಟೆಸ್ಟ್ ಡೋಸ್, ಮಂಡ್ಯ ಹೇಗೆ ಪ್ರತಿಕ್ರಿಯೆ ಕೊಡುತ್ತದೆ ಎಂದು ನೋಡುತ್ತಿದ್ದಾರೆ. ಕೇಂದ್ರ ಸರ್ಕಾರವನ್ನು ಉರುಳಿಸುವ ಷಡ್ಯಂತ್ರ ನಡೆಸಿದ್ದಾರೆ. ಅರಾಜಕಾತೆ ಸೃಷ್ಟಿ ಮಾಡಲು ಷಡ್ಯಂತ್ರ ಮಾಡಲಾಗಿದ್ದು, ಸರಕಾರ ಮೈಮರೆತರೆ ದೇಶಕ್ಕೆ ಅಪಾಯವಿದೆ. ಹಾಗಾಗಿ, ಗಂಭೀರವಾಗಿ ತನಿಖೆ ಮಾಡಬೇಕು. ಮದರಾಸಗಳಲ್ಲಿ ತನಿಖೆ ನಡೆಯಲಿ. ಮುಸ್ಲಿಮರು ಎಲ್ಲರೂ ಕೆಟ್ಟವರಲ್ಲ, ಆದರೆ ಅವರು ಸಹಬಾಳ್ವೆ ಒಪ್ಪುವುದಿಲ್ಲ, ನಾಲ್ಕು ಜನ ಇದ್ದಾಗ ಅವರು ಮೋಸ್ಟ್ ಸೆಕ್ಯಲರ್, 400 ಆದಾಗ ನೋ ಸೆಕ್ಯುಲರ್ ಎಂದು ಹೇಳಿ, ಅಖಂಡ ಭಾರತವಾಗಿದ್ದ ಪರ್ಷಿಯಾವನ್ನು ಕಳೆದುಕೊಂಡಿದ್ದೇವೆ. ವಿಧಾನಸೌದದಲ್ಲಿ ನಾಸೀರ್ ಹುಸೆನ್ ಗೆದ್ದಾಗ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರು. ಇವೆಲ್ಲಾ ಮುಸ್ಲೀಂ ಮಾನಸಿಕತೆ ಎಂದು ತಿಳಿಸಿದ್ದಾರೆ.
ಮಹದೇವಪ್ಪ ಪೋಸ್ಟ್ ಗೆ ಬಗ್ಗೆ ಮಾತನಾಡಿ, “ಗಣಪತಿ ಮೇಲೆ ಕಲ್ಲು ಹೊಡೆದವರನ್ನು ಸಹಿಸಬೇಕು ಎನ್ನುವುದು ಹೇಡಿಗಳು ಹೇಳುವ ಕೆಲಸ ಮಹದೇವಪ್ಪನವರೇ, ಸುಳ್ಳು ಹೇಳಿ ಅಧಿಕಾರ ಅನುಭವಿಸಬಹುದು, ಸತ್ಯ ಹೇಳಿ ಅಧಿಕಾರ ನಡೆಸಿ ಮಸಿದಿ ಒಳಗೆ ನಾವು ಇದುವರೆಗೂ ತಲೆ ಹಾಕಿಲ್ಲ, ಮಸೀದಿಗೆ ಕಲ್ಲು ತಂದವರು ಯಾರು? ಈ ಷಡ್ಯಂತ್ರವನ್ನು ಅರ್ಥ ಮಾಡಿಕೊಳ್ಳಲಿ ಅಂಬೇಡ್ಕರ್ ಪುಸ್ತಕವನ್ನು ಓದಿ ಮಹದೇಪ್ಪನವರೇ, ಓಟಿನ ಆಸೆಗೋಸ್ಕರ ಜೊಲ್ಲು ಸುರಿಸಿ ದೇಶ ಹಾಳು ಮಾಡಬೇಡಿ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.