ಚಿಕ್ಕಮಗಳೂರು : ಮದ್ದೂರು ಗಣಪತಿ ವಿಸರ್ಜನೆ ನಡೆಸುತ್ತಿರುವ ವೇಳೆ ಕಲ್ಲು ತೂರಾಟ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಚಿಕ್ಕಮಗಳೂರಿನಲ್ಲಿ ಎಂ.ಎಲ್.ಸಿ. ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ರವಿ, ಮುಸ್ಲಿಂ ಮತಾಂಧರು ಕಲ್ಲು ತೂರಾಟ ಮಾಡಿದ್ದಾರೆ, ಕಳೆದ ವರ್ಷ ನಾಗ ಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹಾಕಿದ್ದರು. ಆ ವೇಳೆ 30ಕ್ಕೂ ಹೆಚ್ಚು ಅಂಗಡಿಗಳನ್ನು ಟಾರ್ಗೆಟ್ ಮಾಡಿದ್ದರು, ಅದನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಮುಂಜಾಗ್ರತೆ ವಹಿಸಬೇಕಿತ್ತು, ಜಿಲ್ಲಾಡಳಿತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕಿತ್ತು, ಯಾವುದನ್ನು ಮಾಡದೇ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳುವ ಬದಲು ಶಾಂತಿಯಿಂದ ಪ್ರತಿಭಟನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
“ಇಸ್ಲಾಂ ಅಂದರೆ ಶಾಂತಿ, ಮಹಮ್ಮದ್ ಪೈಗಂಬರ್ ಅಂದರೆ ಶಾಂತಿ ಧೂತ ಅಂದಿದ್ದೀರಿ, ನಿಮ್ಮ ದೃಷ್ಟಿಯಲ್ಲಿ ದಲಿತ ಶಾಸಕನ ಮನೆ ಸುಟ್ಟಿದ್ದು, ಠಾಣೆ ಸುಟ್ಟಿದ್ದು, ಕೆ.ಜೆ. ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟಿದ್ದು ಶಾಂತಿ ದೂತರು ಮಾಡಬೇಕಾದ ಕರ್ತವ್ಯ ಎಂದು ಭಾವಿಸಿದ್ದೀರಾ ? ಎಂದು ಪ್ರಶ್ನೆ ಮಾಡಿದ್ದಾರೆ.
ಸಾಗರದಲ್ಲಿ ಗಣೇಶ ಮೆರವಣಿಗೆ ಮೇಲೆ ಚಿಕ್ಕ ಮಕ್ಕಳು ಉಗುಳಿದರು. ಮಕ್ಕಳು ದೇವರಿಗೆ ಸಮಾನ ಎಂದು ಹೇಳುತ್ತಾರೆ, ಹಾಗಾದರೆ ಮಕ್ಕಳ ಹೃದಯದಲ್ಲಿ ದ್ವೇಷದ ವಿಷ ಬೀಜ ಬಿತ್ತಿದ್ದವರು ಯಾರು..? ಮಕ್ಕಳ ತಂದೆ ತಾಯಿಗಳಾ ? ಅಥವಾ ಅವರ ಮದ್ರಸಾದಲ್ಲಿ ಇದೆಲ್ಲಾ ನಡೆಯುತ್ತಿದೆಯೇ !? ಮತೀಯ ಗ್ರಂಥಗಳಲ್ಲಿ ಹೇಳಿ ಕಂಠಪಾಠ ಮಾಡಿಸುತ್ತಾರಾ ? ಇದು ಶಾಂತಿ ಧೂತರು ಮಾಡುವ ಕೆಲಸವೇ ? ಎಂದು ಸಿಎಂ ಸಿದ್ದರಾಮಯ್ಯ ಅವರು ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮಾತನಾಡಿರುವುದಕ್ಕೆ ತಿರುಗೇಟು ನೀಡಿದರು. ಶಾಂತಿ ಧೂತರೇ ಭಾರತ ವಿಭಜನೆಗೆ ಕಾರಣವಾದರೂ, ಲಕ್ಷಾಂತರ ಮರಣಕ್ಕೆ ಕಾರಣವಾದರೂ, ಜಾಗತೀಕ ಭಯೋತ್ಪಾದನೆ ಶೇಕಡ 90ರಷ್ಟು ಕೊಡುಗೆ ಕೊಡುತ್ತಾ ಇರುವಂತವರು. ಇದನ್ನೇ ನೀವು ಶಾಂತಿ ಎನ್ನುವುದಾದರೇ, ಸ್ಮಶಾನದ ಶಾಂತಿ ಆಗುತ್ತದೆ. ಇದು ನೆಮ್ಮದಿ ಕೊಡುವಂತಹ ಬದುಕನ್ನು ಅರಳಿಸುವಂತಹ ಶಾಂತಿ ಆಗಲ್ಲ ಎಂದಿದ್ದಾರೆ.
ಇದೇ ಶಾಂತಿ ಧೂತರು ನಗು ನಗುತ್ತಾ ಇದ್ದ ಬುದ್ಧನ ವಿಗ್ರಹವನ್ನು ಪಿರಂಗಿ ಇಟ್ಟು ಉಡಾಯಿಸಿದರು, ನಿಮಗೆ ಸತ್ಯ ಹೇಳುವುದಕ್ಕೆ ಧೈರ್ಯ ಇಲ್ಲವೇ ? ಓಟಿನ ಆಸೆಗೆ ಎಲ್ಲವನ್ನು ಒಗ್ಗಿಕೊಂಡು ಕಲ್ಲು ತೂರಾಟವನ್ನು ಮಾಡಿದವರನ್ನೇ ಪ್ರಶಂಸಿಸಿ, ಠಾಣೆಗೆ ಬೆಂಕಿ ಇಟ್ಟವರಿಗೆ ಶಾಂತಿಯ ಪಟ್ಟ ಕಟ್ಟಿದರೆ, ನಿಮಗೂ ಸತ್ಯಕ್ಕೂ ಸಂಬಂಧವಿಲ್ಲದಂತಾಗುತ್ತದೆ. ಸರ್ಕಾರದ ನಡೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ನೀತಿಯದ್ದು, ಹಿಂದೂಗಳಿಗೆ ಸುಣ್ಣ ಮುಸಲ್ಮಾನರಿಗೆ ಬೆಣ್ಣೆ ಎಂಬಂತಾಗಿದೆ ಎಂದು ಅವರು ಸಿಟ್ಟಾಗಿದ್ದಾರೆ.