ಮದ್ದೂರು: ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ವಿದ್ಯುತ್ ಕಡಿತಗೊಳಿಸಿ ಅನ್ಯಕೋಮಿನ ಗುಂಪಂದು ಕ ಲ್ಲು ತೂರಾಟ ಮಾಡಿದ್ದು, ಪ್ರತಿಯಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರ ಗುಂಪು ಕೂ ಕಲ್ಲಿನಿಂದ ತೂರಾಟ ನ ಡೆಸಿರುವ ಘಟನೆ ಪಟ್ಟಣದ ಮಸ್ಟೀದ್ ಹುಸೇನ್ ಘನಿ ಮಸೀದಿಯ ಸುನ್ನಿ ಚೌಕದ ಬಳಿ ನಿನ್ನೆ(ಭಾನುವಾರ (ಸೆ.7) ಸಂಜೆ ನಡೆದಿದೆ.
ಪಟ್ಟಣದ ರಾಮ್ ರಹಿಮ್ ನಗರ 6ನೇ ಕ್ರಾಸ್‌ನ ಯುವಕರು ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ವಿಸರ್ಜನೆ ಮೆರವಣಿಗೆ ಮೂಲಕ ಸರ್ಕಾರದ ನಿಯಮದಂತೆ ಎರಡು ಡಿಜೆ ಹಾಕಿಕೊಂಡು ನೃತ್ಯ ಮಾಡುತ್ತಾ ಮಸೀದಿ ಬಳಿ ಬರುತ್ತಿದ್ದಂತೆ ಅನ್ಯಕೋಮಿನ ಗುಂಪೊಂದು ವಿದ್ಯುತ್ ಸ್ಥಗಿತಗೊಳಿಸಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದೆ.

ಇದರಿಂದ ಕೆರಳಿ ಗಣೇಶಮೂರ್ತಿ ಮೇಲೆ ಕಲ್ಲು ನಡೆಸಿದ್ದಕ್ಕೆ ಪ್ರತಿಯಾಗಿ ಯುವಕರು ಅನ್ಯಕೋಮಿನ ಗುಂಪಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಎರಡು ಕೋಮಿನ 10ಕ್ಕೂ ಹೆಚ್ಚು ಯುವಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಘಟನೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳ ಕರೆಸಿಕೊಂಡು ಬಿಗಿ ಬಂದೋಬಸ್ತ್, ಲಘು ಲಾಠಿ ಚಾರ್ಜ್ ಮಾಡಿ ಘಟನೆಯನ್ನು ತಹಬದಿಗೆ ತಂದಿದ್ದಾರೆ. ನಂತರ ಮೆರವಣಿಗೆ ಸ್ಥಗಿತಗೊಳಿಸಿ ಗಣೇಶಮೂರ್ತಿಯನ್ನು ತರಾತುರಿಯಲ್ಲಿಯೇ ಪೊಲೀಸರ ಸಮ್ಮುಖದಲ್ಲಿ ವಿಸರ್ಜನೆ ನಡೆಸಿದ್ದಾರೆ.


















