ಬೆಂಗಳೂರಿನಲ್ಲಿ ತಮಿಳು ಐಕಾನ್ ಶಿವಕಾರ್ತಿಕೆಯನ್ ಸಖತ್ತಾಗೆ ಪ್ರಮೋಷನ್ ಆರಂಭಿಸಿದ್ದಾರೆ. ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಮದರಾಸಿ’ ಪ್ರಚಾರಕ್ಕೆ ಬೆಂಗಳೂರಿನ ಕೋರಮಂಗಲಕ್ಕೆ ಬಂದಿದ್ದ ಶಿವಕಾರ್ತಿಕೆಯನ್ ಗೆ ಭರ್ಜರಿ ವೆಲ್ ಕಂ ಸಿಕ್ಕಿದೆ.
‘ಕಾಂತಾರ ಹಾಗೂ ಟಾಕ್ಸಿಕ್’ನಂಥ ಮಲ್ಟಿಪ್ರಾಜೆಕ್ಟ್ ಗಳಲ್ಲಿ ಬಿಝಿಯಾಗಿರೋ ನಟಿ ರುಕ್ಮಿಣಿ ವಸಂತ ಕೂಡ ಕಾರ್ಯಕ್ರಮದ ಹೈಲೇಟ್ ಆದ್ರು. ಕನ್ನಡಿಗರ ಪ್ರೀತಿಯನ್ನ ಕಂಡು ದಂಗಾದ ಶಿವಕಾರ್ತಿಕೆಯನ್ ಮೊದಲಿಗೆ ಕನ್ನಡದಲ್ಲೇ ಮಾತನಾಡಿ ಧನ್ಯವಾದ ಹೇಳಿದ್ರು. ಇದು ಶಿವಕಾರ್ತಿಕೆಯನ್ 3ನೇ ಸಲ ಬೆಂಗಳೂರಿಗೆ ಬರ್ತಿರೋದಂತೆ. ಕಾಮೆಡಿ, ಆಕ್ಷನ್ ಮಾಡೋ ಶಿವಕಾರ್ತಿಕೆಯನ್ ಈ ಸಲ ಸೈಕಲಾಜಿಕಲ್ ಥ್ರಿಲ್ಲರ್ ಗೆ ಕೈ ಹಾಕಿದ್ದಾರೆ.
ಘಜನಿ ಖ್ಯಾತಿಯ ಮುರುಗದಾಸ್ ಡೈರೆಕ್ಷನ್ ನಲ್ಲಿ ಶಿವ-ರುಕ್ಮಿಣಿ ಫಾರ್ ದಿ ಫಸ್ಟ್ ಟೈಮ್ ಕಾಣಿಸಿಕೊಳ್ತಾರೆ. ಸೆ. 5ಕ್ಕೆ ಸಿನಿಮಾ ನೋಡಿ ಆಮೇಲೆ ಮತ್ತೆ ಸಿಗೋಣ ಎನ್ನುತ್ತಲೇ ಫ್ಯಾನ್ಸ್ ಒತ್ತಾಯದ ಮೇರೆಗೆ ಹುಕ್ ಸ್ಟೆಪ್ ಪ್ರದರ್ಶನವೂ ಆಯ್ತು..!



















