ಬೆಂಗಳೂರು: ಗ್ಯಾಸ್ ಸಿಲಿಂಡರ್, ಆಟೋ ಗ್ಯಾಸ್ ಬೆಲೆ ಏರಿಕೆ ಖಂಡಿಸಿ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಜಟ್ಕ ಬಂಡಿಯಲ್ಲಿ ಖಾಲಿ ಗ್ಯಾಸ್ ಸಿಲಿಂಡರ್‌ಗಳನ್ನ ತಂದು ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಅಮೇರಿಕ, ಇಸ್ರೆಲ್, ಇರಾನ್ ನಡುವೆ ಕಳೆದ ಒಂದು ತಿಂಗಳಿನಿಂದ ಯುದ್ದ ನಡೆಯುತ್ತಿದೆ. ಇದರಿಂದ ಪ್ರಪಂಚಕ್ಕೆ ಹಾನಿ ಆಗಿದೆ. ಅಲ್ಲಿ ಬಾಂಬುಗಳು ಸುರಿಮಳೆ, ಇಲ್ಲಿ ಕಣ್ಣಿನ ಸುರಿಮಳೆ ಸುರಿಯುತ್ತಿದೆ. ಅದೇ ರೀತಿ, ಕರ್ನಾಟಕದ ರಿಕ್ಷಾ ಚಾಲಕರೂ ಕಣ್ಣಲ್ಲಿ ನೀರು ಹಾಕುತ್ತಿದ್ದಾರೆ.
ಬಾಡಿಗೆ, ಹಾಲು ದಿನನಿತ್ಯದ ಖರ್ಚು ಹೇಗೆ ಮಾಡಬೇಕೆಂದು ಪ್ರಶ್ನೆ ರಿಕ್ಷಾ ಆಟೋ ಚಾಲಕರಿಗೆ 10 ಸಾವಿರ ರೂ ಕೋಡಿ ನೀವು ದಾವಣಗೆರೆ, ಬಾಗಲಕೋಟೆ ಯಲ್ಲಿ ಬ್ಯುಸಿ ಆಗಿದ್ದಿರಿ. ದಾವಣಗೆರೆ, ಬಾಗಲಕೋಟೆಯಲ್ಲಿ ಗೆದ್ದರೆ ಸಾಕಾ? ಬೆಂಗಳೂರಿನಲ್ಲಿ ಆಟೋ ಚಾಲಕರು ಸಾಯುತ್ತಿದ್ದಾರೆ.
ಇದೇ ರೀತಿ ರಾಜ್ಯದಲ್ಲಿ ಮುಂದುವರೆದ್ರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯನವರಿಗೆ ಕುಟುಂಬ ರಾಜಕಾರಣ ಬಗ್ಗೆ ಮಾತಾಡುವ ನೈತಿಕತೆ ಇಲ್ಲ : ಹೆಚ್‌ಡಿಕೆ ಕಿಡಿ



















