ಚಿಕ್ಕಮಗಳೂರು: 5 ದಿನಗಳ ನಂತರ ಚಿಕ್ಕಮಗಳೂರಿನ ಪಾರ್ವತಿಪುರ ಇಂಡಿಯನ್ ಬ್ಯಾಂಕ್ ಬಂಕ್‌ಗೆ LPG ಆಟೋ ಗ್ಯಾಸ್ ಬಂದಿದ್ದರಿಂದ ಆಟೋ ರಿಕ್ಷಾ ಸಾಲು ಸಾಲಾಗಿ ಸುಮಾರು 2 ಕಿಲೋ ಮೀಟರ್‌ಗಳಷ್ಟು ದೂರ ನಿಂತಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇರುವ ನಾಲ್ಕು LPG ಗ್ಯಾಸ್ ಬಂಕ್‌ಗಳು ಕೆಲವು ದಿನಗಳಿಂದ ಖಾಲಿಯಾಗಿದ್ದವು. ಇಂದು ಮುಂಜಾನೆ ಬಂಕ್‌ಗೆ ಬಂದ ಸುಮಾರು 3,000 ಲೀಟರ್ ಗ್ಯಾಸ್ ಸಾಗಣೆ, ಸಾಲುಗಟ್ಟಿ ನಿಂತ ನೂರಾರು ಆಟೋಗಳಿಗೆ ಹಂಚಿಕೆಯಾಗುತ್ತಿದೆ.
ಆಟೋಗಳು ಸರಿಯಾಗಿ ಎರಡು ಕಿಲೋಮೀಟರ್ ವರೆಗೂ ಸಾಲುಗಟ್ಟಿ ನಿಂತು, ಹಲವಾರು ಆಟೋ ಚಾಲಕರು ಒಂದು ಗಂಟೆಗೂ ಹೆಚ್ಚು ಕಾಯುವ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಬಂಕ್ ಸಿಬ್ಬಂದಿಗಳು ಪ್ರತಿ ಆಟೋಗೆ 700 ರೂಪಾಯಿ ಮೌಲ್ಯದ ಗ್ಯಾಸ್ ಹಾಕುತ್ತಿದ್ದಾರೆ.
ಗ್ಯಾಸ್ ಇಲ್ಲದೆ ಪರದಾಟ ಪಟ್ಟಿದ್ದ ಆಟೋ ಚಾಲಕರು ಈಗ ಗಂಟೆಗಟ್ಟಲೆ ಕಾಯುತ್ತ, ಗ್ಯಾಸ್ ಪಡೆಯುವ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ನಗರದ ಆಟೋ ಚಾಲಕರು ನಿಟ್ಟೂಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : ಸಾರ್ವಜನಿಕರೇ ಗಮನಿಸಿ: LPG ಸಿಲಿಂಡರ್ ಬುಕ್ ಮಾಡಿದರೆ 200 ರೂ. ಕ್ಯಾಶ್ ಬ್ಯಾಕ್!



















