ಇತ್ತೀಚಿನ ದಿನಗಳಲ್ಲಿ ಪ್ರೀತಿಗೆ ಬೆಲೆಯೇ ಇಲ್ಲ. ಮದುವೆ ಆದ ಮೇಲೆ ಕೂಡ ಗಂಡನನ್ನು ಬಿಟ್ಟು ಹೆಂಡತಿ ಪ್ರಿಯಕರನ ಜೊತೆ ಓಡಿ ಹೋಗಿದ್ದನ್ನು ಅದೆಷ್ಟೋ ಸುದ್ದಿಗಳನ್ನು ನಾವು ನೋಡಿದ್ದೇವೆ.
ಹಲವು ಸಂದರ್ಭಗಳಲ್ಲಿ ಹೆಂಡತಿಯನ್ನು ಬಿಟ್ಟು ಗಂಡ ಬೇರೊಬ್ಬರ ಜೊತೆ ಪ್ರೀತಿಸಿರುವ ಹಲವಾರು ಸುದ್ದಿಗಳನ್ನು ಕೇಳಿದ್ದೇವೆ. ಇಲ್ಲೊಂದು ಕಡೆ ವಿವಾಹಿತೆ ಪರಪುರುಷನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾಳೆ.
ಹೀಗಾಗಿ ಈ ವಿವಾಹಿತ ಮಹಿಳೆಯನ್ನು ಭೇಟಿಯಾಗಲು ಪ್ರಿಯಕರ ಆಕೆಯ ಮನೆಗೆ ಹೋಗಿದ್ದಾನೆ. ಈ ವೇಳೆಯಲ್ಲಿ ಟ್ರಂಕ್ ನಲ್ಲಿ ಅಡಗಿ ಕುಳಿತಿದ್ದಾನೆ. ಆ ವೇಳೆ ಪ್ರಿಯಕರ ಆಕೆಯ ಕುಟುಂಬದವರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಕೆಂಡಾಮಂಡಲವಾಗಿರುವ ಕುಟುಂಬಸ್ಥರು ಹಿಗ್ಗಾಮುಗ್ಗ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶ ಆಗ್ರಾದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರು ತರೇಹವಾರು ಕಾಮೆಂಟ್ ಮಾಡಿದ್ದಾರೆ.


















